ಬೆಂಗಳೂರು: ಒಬ್ಬರಂತೆ ಲೋಕದಲ್ಲಿ ಏಳು ಮಂದಿ ಇರುತ್ತಾರೆ ಎನ್ನುವ ಮಾತಿದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಹೋಲುವ ಮುಖಭಾವ ಇದ್ದರಂತೂ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ.
ಚಲನಚಿತ್ರ ನಟರು, ಕ್ರೀಡಾಪಟುಗಳು ಮತ್ತು ರಾಜಕಾರಣಿಗಳ ತದ್ರೂಪಿಯಂತೆ ಕಾಣಿಸುವ ವ್ಯಕ್ತಿಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲೂ ಹೀಗೆಯೇ ಆಗಿದೆ. ದೀಪಿಕಾ ಅವರಂತೆಯೇ ಕಾಣಿಸುವ ರಿಜುತಾ ಘೋಶ್ ದೇವ್ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ರಿಜುತಾ ನೋಡಲು ದೀಪಿಕಾ ಪಡುಕೋಣೆಯಂತೆ ಕಾಣಿಸುತ್ತಿದ್ದು, ಅವರ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.
ರಿಜುತಾ ಫೋಟೊಗಳಿಗೆ ಜನರು ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದು, ದೀಪಿಕಾ 2.0, ನೀವು ದೀಪಿಕಾ ಅವಳಿ–ಜವಳಿನಾ ಎಂದೆಲ್ಲ ಕೇಳುತ್ತಿದ್ದಾರೆ.
ರಿಜುತಾ ಅವರಿಗೆ ದೊರೆತಿರುವ ಜನಪ್ರಿಯತೆಯಿಂದಾಗಿ ಅವರು ಮಾಡೆಲಿಂಗ್‌ನಲ್ಲಿಯೂ ಮಿಂಚುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.