ADVERTISEMENT

jiohotstar.com ಡೊಮೈನ್‌ಅನ್ನು Relianceಗೆ ಉಚಿತವಾಗಿ ನೀಡಿದ ಈ ಇಬ್ಬರು ಚಿಣ್ಣರು

ಇತ್ತೀಚೆಗೆ ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಒಗ್ಗೂಡಿದ ನಂತರ ಜಿಯೊ ಒಡೆತನದ ರಿಲಯನ್ಸ್‌ಗೆ ಡೊಮೈನ್ ವಿಚಾರವಾಗಿ ಹೊಸ ಚಿಂತೆ ಶುರುವಾಗಿತ್ತು.

ಪಿಟಿಐ
Published 17 ನವೆಂಬರ್ 2024, 10:45 IST
Last Updated 17 ನವೆಂಬರ್ 2024, 10:45 IST
<div class="paragraphs"><p>ಜೈನಾಮ್ ಜೈನ್ , ಜೈವಿಕಾ ಜೈನ್</p></div>

ಜೈನಾಮ್ ಜೈನ್ , ಜೈವಿಕಾ ಜೈನ್

   

ನವದೆಹಲಿ: ಇತ್ತೀಚೆಗೆ ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಒಗ್ಗೂಡಿದ ನಂತರ ಜಿಯೊ ಒಡೆತನದ ರಿಲಯನ್ಸ್‌ಗೆ ಡೊಮೈನ್ ವಿಚಾರವಾಗಿ ಹೊಸ ಚಿಂತೆ ಶುರುವಾಗಿತ್ತು.

ಇದಕ್ಕೆ ಕಾರಣ ವಿಲೀನ ಪ್ರಕ್ರಿಯೆ ಮುನ್ನವೇ ದೆಹಲಿ ಮೂಲದ ವಿದ್ಯಾರ್ಥಿಯೊಬ್ಬ jiohotstar.com ಡೊಮೈನ್ ಅನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿದ್ದ. ಬಳಿಕ ರಿಲಯನ್ಸ್‌ನವರು ಈ ಡೊಮೈನ್ ಬೇಕಾದರೆ ತನ್ನ ಉನ್ನತ ವ್ಯಾಸಂಗಕ್ಕೆ ಕೇಳಿದಷ್ಟು ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ.

ADVERTISEMENT

ಆದರೆ, ಈ ಬೇಡಿಕೆಯನ್ನು ರಿಲಯನ್ಸ್‌ ಕಂಪನಿ ಭವಿಷ್ಯದಲ್ಲಿ ಇದೇ ರೀತಿಯ ಪ್ರಕರಣಗಳಿಗೆ ಮಾದರಿಯಾಗಬಾರದೆಂದು ಆ ವಿದ್ಯಾರ್ಥಿಯ ಬೇಡಿಕೆಯನ್ನು ಬೆಂಬಲಿಸಿರಲಿಲ್ಲ. ನಂತರ ಆ ವಿದ್ಯಾರ್ಥಿ jiohotstar.com ಡೊಮೈನ್ ಅನ್ನು ದುಬೈನಲ್ಲಿರುವ ಭಾರತ ಮೂಲದ ಜೈನಾಮ್ ಜೈನ್ (13) –ಜೈವಿಕಾ ಜೈನ್ (10) ಎನ್ನುವ ಚಿಣ್ಣರಿಗೆ ಮಾರಿದ್ದ.

ದುಬೈನಲ್ಲಿ ಚಾರಿಟಿ ನಡೆಸುತ್ತಿರುವ ಈ ಚಿಣ್ಣರು ಶೈಕ್ಷಣಿಕ ಸಂಬಂಧಿ ಕೆಲಸಗಳನ್ನು ಮಾಡುತ್ತಾರೆ. ಸೇವಾ ಆರ್ಮಿ ಎಂಬ ವೆಬ್‌ಸೈಟ್‌ ಅನ್ನು ಇದಕ್ಕಾಗಿ ರೂಪಿಸಿದ್ದಾರೆ.

ಇದೀಗ ಈ ಚಿಣ್ಣರಿಬ್ಬರು ತಮ್ಮ ಒಡೆತನದಲ್ಲಿರುವ jiohotstar.com ಡೊಮೈನ್ ಅನ್ನು ರಿಲಯನ್ಸ್‌ ಕಂಪನಿಗೆ ಉಚಿತವಾಗಿ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ.

ಈ ಕುರಿತು ಅವರು ಜಿಯೊ ಹಾಟ್‌ಸ್ಟಾರ್‌ ವೆಬ್‌ಸೈಟಿನಲ್ಲಿ ವಿಡಿಯೊ ಮಾಹಿತಿ ಹಂಚಿಕೊಂಡಿದ್ದು ರಿಲಯನ್ಸ್‌ ಐಪಿ ಲೀಗಲ್ ಟೀಂ ಈ ಕುರಿತು ನಮ್ಮನ್ನು ಸಂಪರ್ಕಿಸಿದೆ. ಒಪ್ಪಂದಗಳಿಗೆ ಸಹಿ ಹಾಕಲು ಮುಂಬೈಗೆ ಬರಲಿದ್ದೇವೆ. ಯಾವುದೇ ವದಂತಿಗೆ ಕಿವಿಗೊಡಬೇಡಿ. ನಾವು ಉಚಿತವಾಗಿ ಈ ಡೊಮೈನ್‌ ಅನ್ನು ನೀಡಿದ್ದೇವೆ. ಇದರಿಂದ ಅವರಿಗೆ ಸಹಾಯವಾಗಲಿದೆ ಎನ್ನುವ ಮನೋಭಾವನೆ ನಮ್ಮದು ಎಂದಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರಿಸ್‌ ಮತ್ತು ವಾಲ್ಟ್‌ ಡಿಸ್ನಿ ಲಿಮಿಟೆಡ್‌ ಆಸ್ತಿಗಳ ವಿಲೀನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಇತ್ತೀಚೆಗೆ ಒಪ್ಪಿಗೆ ನೀಡಿತ್ತು.

8 ತಿಂಗಳ ಹಿಂದೆ ₹70 ಸಾವಿರ ಕೋಟಿ ಮೊತ್ತದ ಜಂಟಿ ಉದ್ಯಮ ಒಪ್ಪಂದಕ್ಕೆ ಈ ಎರಡು ಕಂಪನಿಗಳು ಸಹಿ ಹಾಕಿದ್ದವು. 

ರಿಲಯನ್ಸ್ ಇಂಡಸ್ಟ್ರಿಸ್‌ ಲಿಮಿಟೆಡ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್, ಡಿಜಿಟಲ್‌ ಮೀಡಿಯಾ ಲಿಮಿಟೆಡ್‌, ಸ್ಟಾರ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸ್ಟಾರ್‌ ಟೆಲಿವಿಷನ್‌ ಪ್ರೊಡಕ್ಷನ್ಸ್‌ ಲಿಮಿಟೆಡ್‌ ಒಗ್ಗೂಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.