‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್‌ಸೀರೀಸ್‌ಹಿಂದಿಯಲ್ಲಿ ಬಿಡುಗಡೆಯಾಗಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮನೋಜ್ ಬಾಜಪೇಯಿ, ಪ್ರಿಯಾಮಣಿ ಹಾಗೂ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸೀರೀಸ್‌ನಲ್ಲಿ 10 ಎಪಿಸೋಡ್‌ಗಳಿವೆ.
ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಬೇಕಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ಸದ್ಯಕ್ಕೆ ಹಿಂದಿಯಲ್ಲಿ ಬಿಡುಗಡೆಯಾಗಿದೆ. ತಾಂತ್ರಿಕ ಕಾರಣಗಳಿಂದ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿಲ್ಲ ಎಂದು ಅಮೆಜಾನ್ ಪ್ರೈಂ ತಂಡ ತಿಳಿಸಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ಟ್ರೇಲರ್ ಬಿಡುಗಡೆಯಾದಾಗಲೇ ತಮಿಳುನಾಡಿನಲ್ಲಿ ವಿವಾದದ ವಾಸನೆ ಹಬ್ಬಿತ್ತು. ಈ ಸೂಕ್ಷ್ಮತೆ ತಿಳಿದ ಅಮೆಜಾನ್ ಪ್ರೈಂ ತಂಡ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಈ ವೆಬ್ ಸರಣಿ ಬಿಡುಗಡೆ ಮಾಡುವುದನ್ನು ಮುಂದೂಡಿತು.
‘ದಿ ಫ್ಯಾಮಿಲಿ ಮ್ಯಾನ್ 2’ ಕಥೆಯ ಹಂದರ ಭಾರತ, ಪಾಕಿಸ್ತಾನ, ಶ್ರೀಲಂಕಾದವರೆಗೂ ವ್ಯಾಪಿಸಿಕೊಂಡಿದೆ. ಇದು ಭಯೋತ್ಪಾದನೆ ನಿಗ್ರಹದ ಕಥೆಯನ್ನು ಹೊಂದಿದೆ. ಶ್ರೀಲಂಕಾದ ತಮಿಳು ರೆಬೆಲ್ಸ್‌ಗಳ ಹೋರಾಟದೊಂದಿಗೆ ಕಥೆಯು ಆರಂಭವಾಗುತ್ತದೆ. ಇಲ್ಲಿನ ಸ್ಥಳೀಯ ತಮಿಳರನ್ನು ಉಗ್ರಗಾಮಿಗಳಂತೆ ತೋರಿಸಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ.
ಹೀಗಾಗಿ ಜೂನ್ 4ರಿಂದಲೂ #BoycottAmazon ಹಾಗೂ #Familyman2_against_tamils ಟ್ರೆಂಡ್ ಆಗಿವೆ. ಎಲ್‌ಟಿಟಿಇ ಸಂಘಟನೆಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬುದು ವಿವಾದದ ಸ್ವರೂಪ ಪಡೆದುಕೊಂಡಿದೆ. ಎಲ್‌ಟಿಟಿಇಯವರು ಮದ್ಯಪಾನ ಮಾಡುತ್ತಾರೆ, ಕೊಳಕು ಪದಗಳನ್ನು ಬಳಸುತ್ತಾರೆ ಹಾಗೂ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆಂದುಬಿಂಬಿಸಲಾಗಿದೆಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಅಮೆಜಾನ್ ಪ್ರೈಂ ಅನ್ನು ಬ್ಯಾನ್ ಮಾಡಬೇಕು ಹಾಗೂ ಈ ವೆಬ್ ಸರಣಿ ತಮಿಳರವಿರುದ್ಧವಾಗಿದೆ ಎಂದು ಆರೋಪಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ಯಾಮಿಲಿ ಮ್ಯಾನ್ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ #BoycottAmazon ಟ್ರೆಂಡ್ ಆಗುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.