ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದರ‍್ಯಾಪರ್, ಯುಟ್ಯೂಬರ್ ಧರ್ಮೇಶ್ ಪರ್ಮಾರ್ ನಿಧನರಾಗಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು.
ಧರ್ಮೇಶ್ ನಿಧನಕ್ಕೆ ನಟ ರಣವೀರ್ ಸಿಂಗ್, ಸಿದ್ದಾರ್ಥ್ ಚತುರ್ವೇದಿ, ಜೋಯಾ ಅಖ್ತರ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
ರ‍್ಯಾಪರ್ ಆಗಿದ್ದ ಧರ್ಮೇಶ್ ಗಲ್ಲಿಬಾಯ್ ಸಿನಿಮಾದಲ್ಲಿ ಹಾಡೊಂದಕ್ಕೆ ಧನಿ ನೀಡಿದ್ದರು. ಎಂ ಟಾಡ್ ಪಾಡ್ ವೇದಿಕೆ ಮೂಲಕರ‍್ಯಾಪ್ ಮಾಡುತ್ತಿದ್ದರು. ಕಿರುತೆರೆಯಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡಿದ್ದರು.
ಧರ್ಮೇಶ್ ನಿಧನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.