ADVERTISEMENT

ತಂದೆಯನ್ನು ಕಳೆದುಕೊಂಡ ತನ್ನ ಉದ್ಯೋಗಿಯ ಮನೆಗೆ ಹೋಗಿ ಸಂತೈಸಿದ ನಟ ಜಾಕಿ ಶ್ರಾಫ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 11:23 IST
Last Updated 30 ಮಾರ್ಚ್ 2022, 11:23 IST
ಉದ್ಯೋಗಿಯ ಕುಟುಂಬದ ಜತೆ ನಟ ಜಾಕಿ ಶ್ರಾಫ್– ಟ್ವಿಟರ್ ಚಿತ್ರ: @rajsolan_kid
ಉದ್ಯೋಗಿಯ ಕುಟುಂಬದ ಜತೆ ನಟ ಜಾಕಿ ಶ್ರಾಫ್– ಟ್ವಿಟರ್ ಚಿತ್ರ: @rajsolan_kid   

ಬೆಂಗಳೂರು: ಬಾಲಿವುಡ್‌ನಲ್ಲಿ ತೆರೆಯ ಮೇಲೆ ಖಡಕ್ ಆಗಿ ಕಾಣಿಸುವ ನಟ ಜಾಕಿ ಶ್ರಾಫ್ ಅವರ ಮಾನವೀಯತೆಯ ಮತ್ತೊಂದು ಪರಿಚಯ ಇಲ್ಲಿದೆ.

ತಮ್ಮ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ತಂದೆ ಮೃತಪಟ್ಟ ಸುದ್ದಿ ತಿಳಿದ ಜಾಕಿ ಶ್ರಾಫ್, ನೇರವಾಗಿ ಅವರ ಮನೆಗೆ ತೆರಳಿ, ಕುಟುಂಬಸ್ಥರನ್ನು ಸಂತೈಸಿದ್ದಾರೆ.

ಪುಣೆಯ ಚಾಂದ್‌ಖೇಡ್ ಗ್ರಾಮದಲ್ಲಿ ಜಾಕಿ ಅವರ ಫಾರ್ಮ್‌ಹೌಸ್ ಇದೆ. ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನ ತಂದೆ ಮೃತಪಟ್ಟಿದ್ದರು. ಜಾಕಿಗೆ ಈ ವಿಚಾರ ತಿಳಿಯುತ್ತಿದ್ದಂತೆ, ಅವರು ಯುವಕನ ಮನೆಗೆ ಹೋಗಿದ್ದಾರೆ.

ADVERTISEMENT

ಹಳ್ಳಿಯಲ್ಲಿರುವ ಮನೆಗೆ ಹೋದ ಜಾಕಿ, ತಾವೊಬ್ಬ ನಟ ಎಂಬ ಯಾವುದೇ ಭಾವನೆ ಇಟ್ಟುಕೊಳ್ಳದೆ, ಯುವಕನ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾರೆ. ಜತೆಗೆ ನೆಲದಲ್ಲಿಯೇ ಕುಳಿತುಕೊಂಡು, ಮನೆಯವರ ಜತೆಗಿದ್ದು, ಸಂತೈಸಿದ್ದಾರೆ.

ಜಾಕಿ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ತಾಣಗಳಲ್ಲಿ ಫೋಟೊ ಮತ್ತು ವಿಡಿಯೊ ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.