ಬೆಂಗಳೂರು: ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಕಾಣಿಸಿಕೊಂಡಿರುವ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
‘ಕನ್ಯಾದಾನ’ದ ವಿಷಯವನ್ನು ಆಧಾರವಾಗಿಟ್ಟುಕೊಂಡು ಜಾಹೀರಾತನ್ನು ನಿರ್ಮಿಸಲಾಗಿದ್ದು, ವಧುವನ್ನು ದಾನ ಮಾಡಲು ವಸ್ತುವೇ? ಎಂಬ ಪ್ರಶ್ನೆಯನ್ನು ಜಾಹೀರಾತು ಎತ್ತುತ್ತದೆ.
ಜಾಹೀರಾತಿನ ಕುರಿತು ಸಾಮಾಜಿಕ ಜಾಲತಾಣ ’ಕೂ’ ವೇದಿಕೆಯಲ್ಲಿ ಬರೆದುಕೊಂಡಿರುವ ಕಂಗನಾ, 'ನಮ್ಮ ಮೌಲ್ಯಗಳನ್ನು ಅಣಕಿಸಬೇಡಿ' ಎಂದು ಆಲಿಯಾ ಅವರನ್ನು ನೇರವಾಗಿಯೇ ಉಲ್ಲೇಖಿಸಿದ್ದಾರೆ. ಜೊತೆಗೆ ಕನ್ಯಾದಾನದ ಕುರಿತು ವಿವರಿಸಿದ್ದಾರೆ.
'ಎಲ್ಲಾ ಬ್ರಾಂಡ್‌ಗಳಿಗೆ ವಿನಮ್ರ ವಿನಂತಿ ... ನಿಮ್ಮ ವಸ್ತುಗಳನ್ನು ಮಾರಾಟ ಮಾಡಲು ಧರ್ಮವನ್ನು ಬಳಸುವುದನ್ನು ನಿಲ್ಲಿಸಿ, ಅಲ್ಪಸಂಖ್ಯಾತರು ಮತ್ತು ಹಿಂದೂ ದ್ವೇಷಿಗಳನ್ನು ಮೆಚ್ಚಿಸಲು ಪ್ರಯತ್ನಿಸುವ ಹಿಂದೂಫೋಬಿಕ್ ಜಾಹೀರಾತುಗಳನ್ನು ನಿಲ್ಲಿಸಿ ಎಂದಿದ್ದಾರೆ.
'ಮೊದಲು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ‘ದಾನ’ಪರಿಕಲ್ಪನೆಯನ್ನು ತಿಳಿದಿಲ್ಲದ ಮೂರ್ಖರು ನೀವು ಅದನ್ನು ಏನೆಂದು ಖಂಡಿಸುತ್ತೀರಾ?.
'ಮೊದಲು ತ್ಯಾಗದ ತತ್ವಗಳನ್ನು ಹಾಗು ಮಹಿಳೆ ಮತ್ತು ಭೂಮಿಯನ್ನು ಅಸ್ತಿತ್ವದ ಮೂಲವೆಂದು ಏಕೆ ಪರಿಗಣಿಸಲಾಗಿದೆ ಎಂಬುದನ್ನು ತಿಳಿಯಿರಿ' ಎಂದು ಕಂಗನಾ ‘ಕೂ’ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.