ಬೆಂಗಳೂರು: ಸಮಂತಾ ಜತೆಗಿನ ದಾಂಪತ್ಯಮುರಿದು ವಿಚ್ಛೇದನ ಪಡೆದುಕೊಂಡ ನಾಗ ಚೈತನ್ಯ, ಕುಟುಂಬದ ಘನತೆ ಬಗ್ಗೆ ಚಿಂತಿತರಾಗಿದ್ದರು ಎಂದು ನಾಗಾರ್ಜುನ ಹೇಳಿಕೊಂಡಿದ್ದಾರೆ.
ಸಮಂತಾ ಜತೆ ಚರ್ಚಿಸಿದ ಬಳಿಕ ನಾಗ ಚೈತನ್ಯ ವಿಚ್ಛೇದನ ಕೊಡಲು ಒಪ್ಪಿಕೊಂಡಿದ್ದರು. ಆದರೆ ಅಕ್ಕಿನೇನಿ ಕುಟುಂಬದ ಘನತೆ ಮತ್ತು ಸಮಾಜದಲ್ಲಿ ಕೇಳಿಬರಬಹುದಾದ ಮಾತುಗಳ ಬಗ್ಗೆ ನಾಗ ಚೈತನ್ಯ ಹೆಚ್ಚು ಕಳವಳಕ್ಕೀಡಾಗಿದ್ದರು ಎಂದು ಅವರ ತಂದೆ ನಾಗಾರ್ಜುನ ‘ಇಂಡಿಯಾಗ್ಲಿಟ್ಜ್‘ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
2017ರಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಮದುವೆಯಾಗಿದ್ದರು. ನಾಲ್ಕು ವರ್ಷದ ಬಳಿಕ, 2021ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು.
2021ರ ಆರಂಭದಲ್ಲಿ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು. ಇಬ್ಬರೂ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದ್ದರು. ಆದರೆ ಮತ್ತೆ ಅವರ ಮಧ್ಯೆ ಏನಾಯಿತು ಎಂದು ತಿಳಿಯಲಿಲ್ಲ ಎಂದು ನಾಗಾರ್ಜುನ ಹೇಳಿದ್ದಾರೆ.
ವಿಚ್ಛೇದನ ವಿಚಾರ ಕುರಿತು ನಾಗ ಚೈತನ್ಯ ನನ್ನಲ್ಲಿ ಬಹಳ ಚರ್ಚೆ ನಡೆಸಿದ್ದಾರೆ. ನನ್ನ ಬಗ್ಗೆ, ಕುಟುಂಬದ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿಯಿತ್ತು. ಆದರೂ ಸಮಂತಾ ನಿರ್ಧಾರವನ್ನು ಗೌರವಿಸಿ, ನಾಗ ಚೈತನ್ಯ ಒಪ್ಪಿಗೆ ಸೂಚಿಸಿದ್ದರು ಎಂದು ನಾಗಾರ್ಜುನ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.