ಸ್ಯಾನ್ ಫ್ರಾನ್ಸಿಸ್ಕೋ: ಪ್ರಮುಖ ಓಟಿಟಿ ವೇದಿಕೆಯಾದ ‘ನೆಟ್‌ಫ್ಲಿಕ್ಸ್‘ ಇದೀಗ ವಿಡಿಯೊ ಗೇಮಿಂಗ್ ಜಗತ್ತಿಗೂ ಕಾಲಿರಿಸಿದ್ದು, ಇದೇ ಮೊದಲ ಬಾರಿಗೆ ಗೇಮಿಂಗ್ ಸ್ಟುಡಿಯೊಒಂದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಈ ವಿಚಾರವನ್ನು ಮಂಗಳವಾರ ಪ್ರಕಟಿಸಿರುವ ನೆಟ್‌ಫ್ಲಿಕ್ಸ್, ಕ್ಯಾಲಿಪೋರ್ನಿಯಾ ಮೂಲದ ‘ನೈಟ್ ಸ್ಕೂಲ್ ಸ್ಟುಡಿಯೊ‘ವನ್ನು ಖರೀದಿಸಿದೆ. ಕಳೆದಜುಲೈನಲ್ಲಿ ವಿಡಿಯೊ ಗೇಮ್‌ಗಳಲ್ಲಿ ತೊಡಗಿಕೊಳ್ಳುವ ಸೂಚನೆಯನ್ನುನೆಟ್‌ಫ್ಲಿಕ್ಸ್ ನೀಡಿತ್ತು.
ವಿಡಿಯೊ ಗೇಮಿಂಗ್ ಲೋಕದಲ್ಲಿ ಜನಪ್ರಿಯವಾದ ಥ್ರಿಲ್ಲರ್ ಗೇಮ್oxenfree ಅಂತಹ ಗೇಮ್‌ಗಳನ್ನುನೈಟ್ ಸ್ಕೂಲ್ ಸ್ಟುಡಿಯೊ ಸೃಷ್ಟಿಸಿದೆ.
‘ನೈಟ್ ಸ್ಕೂಲ್‌ನ ಕಲಾತ್ಮಕತೆ ಹಾಗೂ ಉತ್ಕೃಷ್ಟತೆ ನಮ್ಮ ಗಮನ ಸೆಳೆದಿದೆ. ಅವರನ್ನು ನಮ್ಮ ಪಾಲುದಾರರನ್ನಾಗಿ ಮಾಡಿಕೊಳ್ಳಲು ಸಂತೋಷ ಎನಿಸಿದ್ದು, ಈ ಮೂಲಕ ನಮ್ಮ ಸೃಜನಶೀಲ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತೇವೆ‘ ಎಂದು ಹೇಳಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಬಂದಂತಹ ಕಾರ್ಯಕ್ರಮಗಳು, ಸಿನಿಮಾಗಳು, ಹಾಗೂ ಶೋಗಳನ್ನು ಆಧರಿಸಿ ಅನೇಕವಿಡಿಯೊ ಗೇಮ್‌ಗಳು ಜನಪ್ರಿಯವಾಗಿದ್ದು, ಈಗ ಸ್ವತಃ ನೆಟ್‌ಫ್ಲಿಕ್ಸ್ ತಾನೇ ಗೇಮಿಂಗ್ ತಾಣಕ್ಕೆ ಕಾಲಿರಿಸಲು ಸಿದ್ದವಾಗಿದೆ.
ಇದನ್ನೂ ಓದಿ:‘ಕಾಮಿಡಿ ವಿತ್ ಕಪಿಲ್ ಶೋ‘ ಮೇಲೆ ಎಫ್ಐಆರ್ ದಾಖಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.