ಮುಂಬೈ: ಜನಪ್ರಿಯ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ದಂಪತಿ ಇದೀಗ ಶುಭ ಸುದ್ದಿ ನೀಡಿದ್ದಾರೆ. ಶ್ರೇಯಾ ಘೋಷಾಲ್ ಅವರು ಗರ್ಭಿಣಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
36 ವರ್ಷದ ಶ್ರೇಯಾ ಘೋಷಾಲ್ ಅವರು ಈ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು,ನಿಮ್ಮ ಎಲ್ಲರ ಪ್ರೀತಿ ಮತ್ತು ಆರ್ಶೀವಾದ ‘ಬೇಬಿ ಶ್ರೇಯಾದಿತ್ಯ’ ಮೇಲಿರಲಿ ಎಂದು ವಿನಂತಿಸಿದ್ದಾರೆ.
‘ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯಕ್ಕೆ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿರುವುದರಿಂದ ನಿಮ್ಮ ಎಲ್ಲ ಪ್ರೀತಿ ಮತ್ತು ಆಶೀರ್ವಾದ ಬೇಕಾಗುತ್ತದೆ’ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
2015ರಲ್ಲಿ ಶ್ರೇಯಾ ಘೋಷಾಲ್ ಅವರು ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ಅವರೊಂದಿಗೆ ವಿವಾಹವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.