ಸಾಮಾಜಿಕ ಜಾಲತಾಣಗಳಲ್ಲಿ ಮೀಮ್, ಟ್ರೋಲ್‌ಗೆ ಗುರಿಯಾದಗಾಯಕಿ ರಾನು ಮಂಡಲ್ ಅವರ ಅತಿಯಾದ ಮೇಕಪ್ ಮೆತ್ತಿಕೊಂಡ ಚಿತ್ರ ಕಿಡಿಗೇಡಿಗಳ ಫೋಟೊಶಾಪ್ ಕೈಚಳಕ ಎಂದು ಗೊತ್ತಾಗಿದೆ.
ಟ್ರೋಲ್ ಆಗುತ್ತಿರುವರಾನು ಚಿತ್ರ ನಕಲಿ ಎಂದು ಕಾನ್ಪುರದ ಮೇಕಪ್ ಕಲಾವಿದೆ ಸಂಧ್ಯಾ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಅಸಲಿ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು,ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಅವರು ಕೋರಿದ್ದಾರೆ.
ಉತ್ತರಪ್ರದೇಶದ ಕಾನ್ಪುರದಲ್ಲಿ ತಮ್ಮ ಮೇಕಪ್ ಸಲೂನ್ ಆರಂಭಿಸಿದ್ದ ಮೇಕಪ್ ಕಲಾವಿದೆ ಸಂಧ್ಯಾ, ಉದ್ಘಾಟನೆ ಸಮಾರಂಭ ನಿಮಿತ್ತ ಕಂಪ್ಲೀಟ್ ಮೇಕ್‌ಓವರ್‌ಗಾಗಿ ರಾನು ಮಂಡಲ್ ಅವರನ್ನು ತಮ್ಮ ಸಲೂನ್‌ಗೆ ಆಹ್ವಾನಿಸಿದ್ದರು. ಅದರಂತೆ ಅಲ್ಲಿಗೆ ತೆರಳಿದ್ದ ರಾನು ಮಂಡಲ್ ಅವರಿಗೆ ಪೀಚ್ ಬಣ್ಣದ ಲೆಹಂಗಾ ತೊಡಿಸಿ ಅದಕ್ಕೊಪ್ಪುವ ಆಭರಣಗಳನ್ನು ಹಾಕಿದ್ದರು. ನಂತರ ರಾನುಗೆ ಮಾಡಲಾಗಿದ್ದ ಮೇಕಪ್ ಚಿತ್ರಗಳನ್ನು ಸಂಧ್ಯಾ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು ಕೂಡ.
ಇದಾದ ಕೆಲವೇ ಹೊತ್ತಿನಲ್ಲಿ ರಾನು ಅವರ ಮೇಕಪ್ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗೆ ಗುರಿಯಾದವು. ವಿಪರೀತ ಮೇಕಪ್‌ನ ಚಿತ್ರಗಳೂ ಕಾಡ್ಗಿಚ್ಚಿನಂತೆ ಸಾಮಾಜಿಕ ತಾಣವನ್ನು ಆವರಿಸಿದ್ದವು.
ಇನ್‌ಸ್ಟಾಗ್ರಾಂನಲ್ಲಿ ರಾನು ಅವರ ನೈಜ ಮೇಕಪ್ ಚಿತ್ರ ಮತ್ತು ಫೋಟೋಶಾಪ್‌ಗೊಂಡ ಚಿತ್ರಗಳನ್ನು ಒಟ್ಟಿಗೆ ಅಪ್ಲೋಡ್ ಮಾಡಿ ವ್ಯತ್ಯಾಸ ಸಾಬೀತು ಮಾಡುವ ಪ್ರಯತ್ನ ಮಾಡಿದ್ದಾರೆ.‘ನೈಜ ಚಿತ್ರಕ್ಕೂ, ಎಡಿಟೆಡ್ ಚಿತ್ರಕ್ಕೂ ಇರುವ ವ್ಯತ್ಯಾಸವನ್ನು ನೀವು ನೋಡಬಹುದು. ನಿಮ್ಮ ಮೀಮ್, ಟ್ರೋಲ್‌ಗಳೆಲ್ಲವನ್ನೂ ಒಪ್ಪುತ್ತೇವೆ. ಅದರಿಂದ ನಾವು ನಕ್ಕಿದ್ದೇವೆ. ಆದರೆ, ಮತ್ತೊಬ್ಬರ ಭಾವನೆಗಳಿಗೆ ಅವು ಧಕ್ಕೆ ತಂದಿವೆ. ಇದು ಒಳ್ಳೆಯದಲ್ಲ. ನಿಜ ಏನು ಎಂಬುದನ್ನು ನೀವೆಲ್ಲರೂ ಈ ಚಿತ್ರಗಳನ್ನು ನೋಡಿದ ಮೇಲೆ ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಾವು ಭಾವಿಸಿದ್ದೇವೆ. ನೈಜತೆ ಮತ್ತು ನಕಲಿ ಯಾವುದೆಂದು ನೀವೇ ತಿಳಿಯುತ್ತೀರಿ ಎಂದು ಭಾವಿಸಿದ್ದೇನೆ. ನಾನು ನಿಮ್ಮಿಂದ ನಿರೀಕ್ಷಿಸುವುದು ಇಷ್ಟೇ,’ ಎಂದು ಅವರು ಟ್ರೋಲ್ ಮಾಡುತ್ತಿರುವವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.