ADVERTISEMENT

ಹಾವನ್ನು ನಾನೇ ಕೈಯಲ್ಲಿ ಹಿಡಿದುಕೊಂಡಿದ್ದೆ, ಮೂರು ಬಾರಿ ಕಚ್ಚಿದೆ: ಸಲ್ಮಾನ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2021, 4:35 IST
Last Updated 29 ಡಿಸೆಂಬರ್ 2021, 4:35 IST
ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ ರಾತ್ರಿ ಹಾವು ಕಡಿದಿತ್ತು..
ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ ರಾತ್ರಿ ಹಾವು ಕಡಿದಿತ್ತು..   

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ ರಾತ್ರಿ ಹಾವು ಕಚ್ಚಿದ್ದು, ಬಳಿಕ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ.

ಆದರೆ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದ್ದ ಸಲ್ಮಾನ್ ಅವರಿಗೆ ಹಾವು ಕಡಿದಿದ್ದು, ಅವರ ಕುಟುಂಬಸ್ಥರು ಮತ್ತು ಗೆಳೆಯರಿಗೆ ಆತಂಕ ಮೂಡಿಸಿತ್ತು.

ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಸೋಮವಾರ ಹೇಳಿಕೆ ನೀಡಿದ್ದು, ಫಾರ್ಮ್‌ಹೌಸ್‌ನಲ್ಲಿದ್ದ ವೇಳೆ ಹಾವು ಮನೆಯೊಳಗಡೆ ಪ್ರವೇಶಿಸಿತ್ತು. ಅದನ್ನು ರಕ್ಷಿಸಿ ಹೊರಗಡೆ ಬಿಡುವ ವೇಳೆಯಲ್ಲಿ ಉಂಟಾದ ಗಡಿಬಿಡಿಯಲ್ಲಿ ಹಾವು ಗೊಂದಲಕ್ಕೀಡಾಗಿ ನನಗೆ ಮೂರು ಬಾರಿ ಕಚ್ಚಿದೆ ಎಂದಿದ್ದಾರೆ.

ADVERTISEMENT

ಕಚ್ಚಿದ ಹಾವು ವಿಷಕಾರಿಯಲ್ಲ ಎಂಬುದು ತಿಳಿಯಿತು. ಆದರೂ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ತೆರಳಿ, ವಿಷ ನಿರೋಧಕ ಚುಚ್ಚುಮದ್ದು ಮತ್ತು ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ.

ಹಾವು ಕಚ್ಚಿದ ವಿಚಾರ ತಿಳಿದು ನನ್ನ ತಂದೆ ಸಲೀಮ್ ಖಾನ್ ಆತಂಕಕ್ಕೀಡಾಗಿದ್ದರು. ಅವರ ಜತೆ ಮಾತನಾಡಿ, ನಾನು ಮತ್ತು ಹಾವು ಇಬ್ಬರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದೇನೆ ಎಂದು ಸಲ್ಮಾನ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.