ಅವ್ವಾ ಕೇಳೇ... ತಿಳಿ ನೀಲಿ ಆಗಸದಿ ಎಲ್ಲಿರುವೇ ಹೇಳೇ...
ಇದು ಸತೀಶ್ ಅವರ ಭಾವಕೋಶದ ಹಾಡು. ‘ನಾನು ಕಂಡ ನನ್ನವ್ವನನ್ನು ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ಹಾಡು’ ಎಂದು ಹೇಳಿಕೊಂಡಿದ್ದಾರೆ ನೀನಾಸಂ ಸತೀಶ್.
ನೀನಾಸಂ ಸತೀಶ್ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಸುಮಾರು 4 ನಿಮಿಷಗಳಷ್ಟಿರುವ ಹಾಡನ್ನು ಸಾವಿರಾರು ವೀಕ್ಷಕರು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಸತೀಶ್ ಅವರ ಆರ್ದ್ರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಹಾಡಿನ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸತೀಶ್, ಬಯಲು, ಗದ್ದೆ, ಕೆರೆಯಲ್ಲಿ ಏಕಾಂಗಿಯಾಗಿ ಹೋಗುತ್ತಾ ಹಾಡುತ್ತಾ ಸಾಗುತ್ತಿದ್ದಾರೆ. ಅಮ್ಮನ ರೇಖಾಚಿತ್ರವೊಂದು ಮೂಡಿ ಮರೆಯಾಗುತ್ತದೆ.
ಸತೀಶ್ ಆಡಿಯೋ ಹೌಸ್‌ನ ಯುಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಸತೀಶ್ ಜೊತೆ ಪುಟ್ಟ ಬಾಲಕಿಯ ಧ್ವನಿ ಮನಸ್ವಿತಾ ಅವರಿಂದ ಮೂಡಿಬಂದಿದೆ. ಪೂರ್ಣ ಚಂದ್ರನ್ ತೇಜಸ್ವಿ ಅವರ ಸಂಗೀತವಿದೆ. ಮೋನಿಷ್ ಕುಮಾರ್ ಈ ಹಾಡಿನ ಪ್ರೋಗ್ರಾಮಿಂಗ್ ಮಾಡಿದ್ದಾರೆ. ನವೀನ್ ಕುಮಾರ್ ಅವರ ಧ್ವನಿ ಸಂಯೋಜನೆ ಇದೆ. ಹಲವು ಚಿತ್ರಗಳಲ್ಲಿ ಈಗಾಗಲೇ ಛಾಪು ಮೂಡಿಸಿರುವ ಸತೀಶ್ ಈಗ ಸಾಹಿತ್ಯ, ಗಾಯನದತ್ತಲೂ ೊಲವು ತೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.