ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ನೆಟ್‌ಫ್ಲಿಕ್ಸ್‌ನ ‘ದಿ ಆರ್ಚೀಸ್‘ ವೆಬ್ ಸಿರೀಸ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ವೆಬ್ ಸಿರೀಸ್ ಶೂಟಿಂಗ್ ವಿವಿಧ ತಾಣಗಳಲ್ಲಿ ನಡೆಯುತ್ತಿದ್ದು, ಸುಹಾನಾ ಖಾನ್ ಅವರು ಊಟಿಯಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ಸುಹಾನಾ ಜತೆ ಖುಷಿ ಕಪೂರ್ ಕೂಡ ಜೋಯಾ ಅಖ್ತರ್ ನಿರ್ದೇಶನದ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ.
ಇಬ್ಬರೂ ಯುವತಾರೆಯರು ಚಿತ್ರತಂಡದೊಂದಿಗೆ ಶೂಟಿಂಗ್ ಅನ್ನು ಆನಂದಿಸುತ್ತಿದ್ದೇವೆ ಎಂದು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಕಪ್ಪು ಬಣ್ಣದ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿರುವ ಸುಹಾನಾ ಫೋಟೊ, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.