ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೊ ಒಂದು ಎಲ್ಲರ ಗಮನ ಸೆಳೆದಿದೆ.
ಪಠಾಣ್ ಚಿತ್ರದ ಹೊಸ ಲುಕ್‌ನಲ್ಲಿ ಶಾರುಖ್ ಖಾನ್ ಅವರು 8 ಪ್ಯಾಕ್ ಮೈಕಟ್ಟು ಪ್ರದರ್ಶಿಸಿದ್ದಾರೆ.
ಫೋಟೊದಲ್ಲಿ ಶಾರುಖ್ ಖಾನ್ ಅವರು ಶರ್ಟ್ ಕಳಚಿ, ಎಂಟು ಪ್ಯಾಕ್ ಪ್ರದರ್ಶಿಸಿದ್ದು, ಅದನ್ನು ಪೋಸ್ಟ್ ಮಾಡಿರುವ ಸುಹಾನಾ, ತಂದೆಯ ಫಿಟ್ನೆಸ್ ಅನ್ನು ಹೊಗಳಿದ್ದಾರೆ.
ನನ್ನ ಅಪ್ಪನಿಗೆ ಈಗ 56, ಅವರ ಮೈಕಟ್ಟು ನೋಡಿ.. ಹೀಗಿರುವಾಗ ನಾವು ನೆಪಹೇಳುವಂತಿಲ್ಲ ಎಂದು ಸುಹಾನಾ ಹೇಳಿದ್ದಾರೆ.
ಸುಹಾನಾ ಪೋಸ್ಟ್ ಮಾಡಿರುವ ಚಿತ್ರವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ವಾಹ್ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.