ಗುಂಡಿನ ದಾಳಿಗೆ ಸಿಲುಕಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮ್ಯೂಸಿಕ್ ವಿಡಿಯೊ ಒಂದನ್ನು ಯೂಟ್ಯೂಬ್ ಡಿಲೀಟ್ ಮಾಡಿದೆ.
ಸಟ್ಲೇಜ್ ಮತ್ತು ಯಮುನಾ ನದಿ ಜೋಡಣೆ ಮತ್ತು ಕಾಲುವೆ ಕುರಿತ ಎಸ್‌ವೈಎಲ್ ಎಂಬ ಮ್ಯೂಸಿಕ್ ವಿಡಿಯೊವನ್ನು ಸರ್ಕಾರದ ದೂರಿನ ಮೇರೆಗೆ ಯೂಟ್ಯೂಬ್ ಡಿಲೀಟ್ ಮಾಡಿದೆ.
ನದಿ ನೀರು ಹಂಚಿಕೆ ಕುರಿತು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಮಧ್ಯೆ ವ್ಯಾಜ್ಯ ಇದ್ದು, ಹೀಗಾಗಿ ವಿಡಿಯೊ ಡಿಲೀಟ್ ಮಾಡುವಂತೆ ಸೂಚಿಸಲಾಗಿತ್ತು.
ಸಿಧು ಮರಣೋತ್ತರವಾಗಿ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ ಎನ್ನಲಾಗಿತ್ತು. ಈ ವಿಡಿಯೊಗೆ 3 ಕೋಟಿಗೂ ಅಧಿಕ ವೀವ್ಸ್ ಬಂದಿದ್ದು, 33 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಬಂದಿತ್ತು. ಆದರೆ ಈ ವಿಡಿಯೊ ಉಭಯ ರಾಜ್ಯಗಳ ನಡುವೆ ಗಲಭೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.