ADVERTISEMENT

ಅಗಸ್ಟ್ 1ಕ್ಕೆ ರಂಗಶಂಕರದಲ್ಲಿ ‘ಕಾಕದೋಷ‘

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 1:16 IST
Last Updated 20 ಜುಲೈ 2024, 1:16 IST
<div class="paragraphs"><p><strong>ಆ.1ಕ್ಕೆ ರಂಗಶಂಕರದಲ್ಲಿ ‘ಕಾಕದೋಷ’</strong></p></div>

ಆ.1ಕ್ಕೆ ರಂಗಶಂಕರದಲ್ಲಿ ‘ಕಾಕದೋಷ’

   

ಬೆಂಗಳೂರು: ನಾಟಕಕಾರ ವೆಂಕಟೇಶ್ ಪ್ರಸಾದ್ ಅವರು ಅನುವಾದಿಸಿ, ನಿರ್ದೇಶಿಸಿದ ’ಕಾಕದೋಷ‘ ನಾಟಕ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. 

ಮೊದಲ ಬಾರಿಗೆ 2019ರಲ್ಲಿ ಲಂಡನ್‌ನಲ್ಲಿ ಈ ನಾಟಕ ಪ್ರದರ್ಶನಗೊಂಡಿತ್ತು. ಇದೇ ಮೊದಲ ಬಾರಿಗೆ ಭಾರತದೊಳಗೆ ಕನ್ನಡದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ADVERTISEMENT

ಮೂಲತಃ  ಇಂಗ್ಲಿಷ್‌ನ ಪ್ರಖ್ಯಾತ ನಾಟಕಕಾರ ಹೆನ್ರಿಕ್ ಇಬ್ಸೆನ್‌ನ ’ಘೋಸ್ಟ್’ ನಾಟಕದ ಎಳೆಯನ್ನು ಆಧರಿಸಿ ಭಾರತದಲ್ಲಿ 2012ರಲ್ಲಿ ನಡೆದ ನಿಜಘಟನೆಯ ಕುರಿತು ಅನುಪಮಾ ಚಂದ್ರಶೇಖರ್ ಬರೆದ ‘ ವೆನ್ ದ ಕ್ರೌನ್ ವಿಸಿಟ್’ ನಾಟಕವನ್ನು ವೆಂಕಟೇಶ್ ಪ್ರಸಾದ್ ‘ಕಾಕದೋಷ‘ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. 

ಬೆಂಗಳೂರಿನ ಸಾಂಪ್ರದಾಯಿಕ ಕುಟುಂಬದ ಶಾರದ, ಗಂಡನನ್ನು ಕಳೆದುಕೊಂಡಿದ್ದಾಳೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮಗ ಅಕ್ಷಯ್‌ನೇ ಅವಳಿಗೆ ಆಸರೆ. ಹಳೆ ತಲೆಮಾರಿನ ಅತ್ತೆ ಸೀತಮ್ಮ ಹಾಗೂ ಹೊಸ ತಲೆಮಾರಿನ ಮಗ ಅಕ್ಷಯ್ ನಡುವೆ ನಿಂತಿರುವ ಶಾರದೆಗೆ ಸಂದಿಗ್ದ ಪರಿಸ್ಥಿತಿಯೊಂದು ಎದುರಾಗುತ್ತದೆ. ಅಮಾನುಷ ಕೃತ್ಯವೊಂದರಲ್ಲಿ ಭಾಗಿಯಾಗಿ ಮಗ ಮನೆ ಸೇರಿದಾಗ ಶಾರದಳ ಮುಂದಿರುವ ಆಯ್ಕೆಗಳೇನು ಎಂಬುದೇ ನಾಟಕದ ಕಥಾವಸ್ತು. 

ಕಾಕದೋಷವು ಈಗಾಗಲೇ ಹಲವು ಯಶಸ್ವಿ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. 

ವೆಂಕಟೇಶ್‌ ಪ್ರಸಾದ್ ಆರಂಭಿಸಿದ ರಂಗ ಸಂಘಟನೆ ’ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಈ ನಾಟಕವನ್ನು ಪ್ರಸ್ತುತ ಪಡಿಸಲಿದ್ದು, ಆಗಸ್ಟ್ 1ರ ಸಂಜೆ 7.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಟಿಕೇಟ್‌ಗಳು ಬುಕ್‌ಮೈ ಶೋ ವೈಬ್‌ಸೈಟ್‌ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ – 9900182400  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.