ಹಿರಿತೆರೆ ಹಾಗೂ ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಜನಪ್ರಿಯ ನಾಟಕ ‘ನಮ್ಮೊಳಗೊಬ್ಬ ನಾಜೂಕಯ್ಯ’ ಇದೇ ಭಾನುವಾರ (ಏಪ್ರಿಲ್ 16)ದಂದು ನಗರದ ‘ರಂಗ ಶಂಕರ’ದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎರಡು ಪ್ರದರ್ಶನಗಳಿವೆ. ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ. ಹೆಸರಾಂತ ರಂಗ ತಂಡ ‘ನಟರಂಗ’ ಪ್ರಸ್ತುತಪಡಿಸುತ್ತಿರುವ ನಾಟಕವಿದು.
ನಾಟಕ ನಿರ್ದೇಶನ: ಹವ್ಯಾಸಿ ರಂಗಭೂಮಿಯ ಖ್ಯಾತ ನಿರ್ದೇಶಕ ಆರ್. ನಾಗೇಶ್‌ರವರದ್ದು. ಮರು ನಿರ್ದೇಶನ: ಟಿ.ಎನ್.ಸೀತಾರಾಮ್. ನಟವರ್ಗದಲ್ಲಿ ನಟರಾದ ಟಿ.ಎನ್.ಸೀತಾರಾಮ್, ಗಿರಿಜಾ ಲೋಕೇಶ್, ಎಂ.ಪಿ.ವೆಂಕಟರಾವ್, ಪದ್ಮಜ ಶ್ರೀನಿವಾಸ್ ಮತ್ತಿತರ ಹೆಸರಾಂತ ಕಲಾವಿದರು ಇದ್ದಾರೆ.
ಜನಪ್ರಿಯ ನಾಟಕ
ಕನ್ನಡ ರಂಗಭೂಮಿಯ ಪ್ರಮುಖ ರಂಗ ತಂಡಗಳಲ್ಲಿ ಒಂದಾದ ‘ನಟರಂಗ’ ಆರಂಭವಾ ದದ್ದು 1972ರಲ್ಲಿ. ಇದು ಕಾಕನಕೋಟೆ, ತುಘಲಕ್... ಮುಂತಾದ ನಾಟಕಗಳ ಪ್ರದರ್ಶನ ಗಳನ್ನು ಕೊಟ್ಟ ಸಂಸ್ಥೆ.
ಇದಾದ ನಂತರ 1993ರಲ್ಲಿ ಮೂಡಿಬಂದ ಮತ್ತೊಂದು ಮಹತ್ವದ ನಾಟಕವೇ ಟಿ.ಎನ್. ಸೀತಾರಾಮ್ ಅವರ ‘ನಮ್ಮೊಳಗೊಬ್ಬ ನಾಜೂಕಯ್ಯ’.
ಇದು ಸುಮಾರು 30 ವರ್ಷಗಳ ಹಿಂದೆ ಬರೆದಿದ್ದಾರೂ, ಅದು ಇಂದಿಗೂ ಪ್ರಸ್ತುತವಾಗಿದೆ ಎನ್ನುತ್ತಾರೆ ರಂಗಕರ್ಮಿ, ಸಂಘಟಕ ಜಿ. ಕಪ್ಪಣ್ಣ
ಮಧ್ಯಮವರ್ಗದ ಕುಟುಂಬಗಳು ಹೇಗೆ ಒಬ್ಬ ಬಲಾಢ್ಯರ ಕೈಗೆ ಸಿಕ್ಕಿದರೆ ನಲಗುತ್ತವೆ. ಅಸಹಾಯಕವಾಗಿ ನಿಲ್ಲುತ್ತವೆ ಎಂಬುದು ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕದ ವಸ್ತು.
ಒಂದು ಮಧ್ಯಮ ವರ್ಗದ ಕಾರ್ಖಾನೆಯ ಮಾಲಿಕನಾಗಿದ್ದ ಒಬ್ಬ ವ್ಯಕ್ತಿ ಮತ್ತು ಅವನ ಕುಟುಂಬ ಬಲಾಢ್ಯರನ್ನು ಎದುರು ಹಾಕಿಕೊಂಡು ಹೆಣಗಬೇಕಾಗುತ್ತದೆ ಎಂಬುದನ್ನು ಮಾರ್ಮಿಕವಾಗಿ, ತೋರಿಸುವುದು ಮತ್ತು ಅದನ್ನು ವ್ಯಂಗ್ಯದ ನಗುವಿನ ಮೂಲಕ ತೋರಿಸುವುದು ಈ ನಾಟಕದ ಗುರಿ.
ಈ ನಾಟಕ ರಾಷ್ಟ್ರದ ಎಲ್ಲಾ ಮುಖ್ಯ ಕೇಂದ್ರಗಳಲ್ಲೂ ಪ್ರದರ್ಶನ ಕಂಡಿದೆ. ರಾಜ್ಯದಾದ್ಯಂತ ಪ್ರದರ್ಶನ ಕಂಡಿರುವ ನಾಟಕ. ಭಾನುವಾರ ರಂಗಶಂಕರದಲ್ಲಿ ನಡೆಯುತ್ತಿರುವುದು ನಾಟಕದ 132 ಮತ್ತು 133ನೆಯ ಪ್ರದರ್ಶನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.