ಬೆಂಗಳೂರು: ನಟ ಆದಿತ್ಯ ಸೀಲ್ ಜತೆ ಸಪ್ತಪದಿ ತುಳಿಯಲು ಸಜ್ಜಾಗಿರುವ ನಟಿ ಅನುಷ್ಕಾ ರಂಜನ್, ಮನೆಯಲ್ಲಿ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮ ಆಯೋಜಿಸಿದ್ದರು.
ಸಂಗೀತ್ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಆಲಿಯಾ ಭಟ್, ವಾಣಿ ಕಪೂರ್ ಮತ್ತು ಕಿರುತೆರೆಯ ಕ್ರಿಸ್ಟಲ್ ಡಿಸೋಜಾ, ಅಸ್ಲಾನ್ ಗೋನಿ ಅಹಿತ ಹಲವರು ಹೆಜ್ಜೆ ಹಾಕಿದ್ದಾರೆ.
ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮದ ವಿಡಿಯೊ ಮತ್ತು ಫೋಟೊಗಳನ್ನು ನಟಿ ಆಲಿಯಾ ಭಟ್, ವಾಣಿ ಕಪೂರ್ ಮತ್ತು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಗೀತ್ ಕಾರ್ಯಕ್ರಮಕ್ಕಾಗಿಯೇ ಆಲಿಯಾ ಭಟ್ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರೆ, ವಾಣಿ ಕಪೂರ್ ಗುಲಾಬಿ ಬಣ್ಣದ ಲೆಹಂಗಾ ತೊಟ್ಟಿದ್ದಾರೆ.
ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ ಆಲಿಯಾ ಮತ್ತು ವಾಣಿ ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಷ್ಕಾ-ಆದಿತ್ಯ ಜೋಡಿಗೆ ಶುಭಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.