ಬೆಂಗಳೂರು: ನೋ ಎಲಿಮಿನೇಷನ್ ಮೂಲಕ ಸ್ಪರ್ಧಿಗಳಿಗೆ ಸಂಕ್ರಾಂತಿ ಸಿಹಿ ನೀಡಿರುವ ಬಿಗ್ಬಾಸ್, ಇದೀಗ ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್ಗಳನ್ನು ನೀಡುತ್ತಿದ್ದಾರೆ.
‘ಈ ವಾರದ ನಾಮಿನೇಷನ್ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರು ಸದಸ್ಯರು ಬಲಿಯಾಗಬೇಕು’ ಎಂದು ಹೇಳಿರುವ ಬಿಗ್ಬಾಸ್ ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದನ್ನು ನೀಡಿದ್ದಾರೆ.
ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸದಸ್ಯರು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಫೋಟೊವನ್ನು ಧಗಧಗಿಸಿ ಉರಿಯುತ್ತಿರುವ ಬೆಂಕಿಗೆ ಸ್ಪರ್ಧಿಗಳು ಹಾಕಬೇಕು. ಇದರನ್ವಯ ಸಂಗೀತಾ ಅವರು ಪ್ರತಾಪ್ ಅವರ ಫೋಟೊವನ್ನು ಬೆಂಕಿಗೆ ಎಸೆದಿದ್ದಾರೆ. ‘ನಾನು ಇದುವರೆಗೆ ನೋಡಿರುವ ಪ್ರತಾಪ್ ಬೇರೆಯೇ, ಈಗ ನೋಡ್ತಿರೋ ಪ್ರತಾಪ್ ಬೇರೆಯೇ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತೇನೆ’ ಎಂದು ವಿವರಣೆ ನೀಡಿದ್ದಾರೆ.
ತುಕಾಲಿ ಸಂತೋಷ್ ಮತ್ತು ತನಿಷಾ ಇಬ್ಬರೂ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರೊಂದಿಗೆ ತನಿಷಾ, ಪ್ರತಾಪ್ ಫೋಟೊವನ್ನು ಹರಿದು ಬೆಂಕಿಗೆ ಎಸೆದಿದ್ದಾರೆ. ಜೊತೆಗೆ, ‘ಹೇಳುವಂಥ ಮಾತು ಉಳಿಸಿಕೊಳ್ಳಕ್ಕಾಗಲ್ಲ, ಹಾರ್ಟಿಗೆ ಚುಚ್ಚಿದ್ರೆ ನಾನು ಡೈರೆಕ್ಟ್ ಬೆಂಕಿಗೇ ಹಾಕ್ತೀನಿ. ಸುಟ್ಟು ಪುಡಿ ಪುಡಿಯಾಗಿ, ಬೂದಿನೂ ಸಿಗದಿರುವಷ್ಟು ಕ್ರೂರ ಆಗಿಬಿಡ್ತೀನಿ’ ಎಂದು ಖಡಕ್ ಆಗಿ ಹೇಳಿದ್ದಾರೆ.
ಬಿಗ್ಬಾಸ್ ಕಾರ್ಯಕ್ರಮ ಅಂತಿಮ ಹಂತ ತಲುಪಿದ್ದು, ಮನೆಯೊಳಗಿನ ಸದಸ್ಯರ ನಡುವೆ ಗೆಲ್ಲಬೇಕೆಂಬ ಸ್ಪರ್ಧೆಯೂ ಅಷ್ಟೇ ಬಿರುಸಾಗಿದೆ. ಹಾಗಾದರೆ, ಈ ವಾರ ಯಾರೆಲ್ಲ ನಾಮಿನೇಟ್ ಆಗುತ್ತಾರೆ. ಅಂತಿಮ ಹಂತಕ್ಕೆ ಯಾರು ತಲುಪುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.