ADVERTISEMENT

Bigg Boss 8: ಉಟ್ಟ ಬಟ್ಟೆಯಲ್ಲೇ ಒಂದು ವಾರ.. ತ್ಯಾಗ ಮಾಡಿ ಹೀರೊ ಆದ ಶಮಂತ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 7:29 IST
Last Updated 22 ಏಪ್ರಿಲ್ 2021, 7:29 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್    
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್       

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ಮಂಕಾಗಿದ್ದ ಶಮಂತ್ ಇದೀಗ ಉತ್ಸಾಹದಿಂದ ವರ್ತಿಸುತ್ತಿದ್ದಾರೆ. ಎಲ್ಲ ಟಾಸ್ಕ್‌ಗಳಲ್ಲೂ ಮುನ್ನುಗ್ಗುತ್ತಿರುವ ಬ್ರೋಗೌಡ ಇದೀಗ ಮನೆಯ ಸದಸ್ಯರ ಉಪಕಾರಕ್ಕೆ ಪ್ರತಿ ಉಪಕಾರ ಮಾಡಿ ಹೀರೊ ಆಗಿದ್ದಾರೆ.

ಉಟ್ಟ ಬಟ್ಟೆಯಲ್ಲೇ ಒಂದು ವಾರ: ಮನೆಯ ಸದಸ್ಯರನ್ನು ಬಿಗ್ ಬಾಸ್ ಕಠಿಣ ಪರೀಕ್ಷೆಗೆ ಒಳಪಡಿಸಿದ್ದಾರೆ. ಮನೆಯ ಎಲ್ಲ ಸೌಲಭ್ಯವನ್ನು ಹಿಂಪಡೆದಿದ್ದು, ಟಾಸ್ಕ್‌ಗಳಲ್ಲಿ ಗೆದ್ದು ಸೌಲಭ್ಯ ಪಡೆಯುವಂತೆ ತಿಳಿಸಿದ್ದಾರೆ. ಸದ್ಯ, ದಿನಸಿ, ಹೊದಿಕೆ, ಅಡುಗೆ ಪಾತ್ರೆಗಳನ್ನು ಪಡೆದಿರುವ ಸದಸ್ಯರಿಗೆ ಅವರ ಬಟ್ಟೆ ಇರುವ ಸೂಟ್‌ಕೇಸ್‌ಗಳನ್ನು ಹಿಂಪಡೆಯಲು ಬಿಗ್ ಬಾಸ್ ಟಾಸ್ಕ್ ನೀಡಿದ್ದರು.

ಈ ಟಾಸ್ಕ್‌ನಲ್ಲಿ ಅರವಿಂದ್ ಹಿನ್ನಡೆ ಅನುಭವಿಸಿದ್ದರಿಂದ ಸೋಲಾಯಿತು. ಹಾಗಾಗಿ, ಮನೆಯ ಸದಸ್ಯರಿಗೆ ಅವರ ಬಟ್ಟೆಗಳಿದ್ದ ಸೂಟ್‌ಕೇಸ್ ಸಿಗಲಿಲ್ಲ. ನಿಯಮದ ಪ್ರಕಾರ, ಒಮ್ಮೆ ಟಾಸ್ಕ್ ಸೋತರೆ ಆ ಸೌಲಭ್ಯ ಒಂದು ವಾರ ಕಾಲ ಮನೆಯ ಸದಸ್ಯಯರಿಗೆ ಸಿಗುವುದಿಲ್ಲ. ಆದರೆ, ಈ ಪರಿಸ್ಥಿತಿ ಕಂಡು ಮರುಗಿದ ಬಿಗ್ ಬಾಸ್, ಸೂಟ್ ಕೇಸ್ ಪಡೆಯಲು ಇನ್ನೊಂದು ಅವಕಾಶ ಕೊಟ್ಟರು. ಮನೆಯ ಒಬ್ಬ ಸದಸ್ಯ ಒಂದು ವಾರ ಬಟ್ಟೆಗಳ ಸೂಟ್ ಕೇಸ್ ತ್ಯಾಗ ಮಾಡಿದರೆ ಉಳಿದ ಎಲ್ಲರಿಗೂ ಸೂಟ್ ಕೇಸ್ ಕೊಡುವ ಆಫರ್ ಕೊಟ್ಟರು.

ADVERTISEMENT

ಬಿಗ್ ಬಾಸ್ ಮಾತನ್ನು ಕೇಳಿ ಮಂಜು ಪಾವಗಡ, ರಾಜೀವ್ ಮುಂತಾದವರು ಮುಂದೆ ಬಂದರು. ಆದರೆ, ಶಮಂತ್ ಕಳೆದ ಬಾರಿ ನನಗಾಗಿ ಮನೆಯ ಸದಸ್ಯರೆಲ್ಲ ಬೆಡ್ ರೂಮ್ ತ್ಯಾಗ ಮಾಡಿದ್ದರು. ಹೀಗಾಗಿ, ಅವರಿಗಾಗಿ ನಾನು ನನ್ನ ಬಟ್ಟೆಗಳಿರುವಸೂಟ್‌ಕೇಸ್ ತ್ಯಾಗ ಮಾಡಿ ಉಟ್ಟ ಬಟ್ಟೆಯಲ್ಲೇ ಒಂದು ವಾರ ಕಳೆಯುವುದಾಗಿ ಘೋಷಿಸಿದರು. ಯಾರ ತಲೆಯಲ್ಲಾದರೂ ಬೆಡ್ ರೂಮ್ ತ್ಯಾಗದ ವಿಷಯವಿದ್ದರೆ ತೆಗೆದು ಹಾಕಿ ಎಂದು ಮನವಿ ಮಾಡಿದರು.ಈ ನಿರ್ಧಾರದಿಂದಾಗಿ ಶಮಂತ್ ಒಂದು ವಾರ ಕಾಲ ಸಅ್ಯ ಹಾಕಿರುವ ಬಟ್ಟೆಯಲ್ಲೇಇರಬೇಕು. ಬೇರೆಯವರ ಬಟ್ಟೆಗಳನ್ನೂ ಹಾಕಿಕೊಳ್ಳುವಂತಿಲ್ಲ.

ಬಿಗ್ ಬಾಸ್ ಬಳಿ ಹೇಳಿಕೊಂಡ ಶಮಂತ್: ನನಗಾಗಿ ಈ ಹಿಂದೆ ಮನೆಯ ಸದಸ್ಯರು ಬೆಡ್ ರೂಮ್ ತ್ಯಾಗ ಮಾಡಿ ನಾಮಿನೇಶನ್‌ನಿಂದ ಪಾರು ಮಾಡಿದ್ದರು. ಉಪಕಾರಕ್ಕೆ ಪ್ರತಿ ಉಪಕಾರ ಮಾಡದಿದ್ದರೆ ನನ್ನ ಮನಸ್ಸು ಒಪ್ಪುವುದಿಲ್ಲ ಎಂದು ಕ್ಯಾಮೆರಾ ಬಳಿ ಹೋಗಿ ಮನದಾಳ ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.