ADVERTISEMENT

Big Boss 8: ಅರವಿಂದ್–ದಿವ್ಯಾ ಉರುಡುಗ ಪ್ರೇಮಕ್ಕೆ ಶುಭಾ ಪೂಂಜಾ ರಾಯಭಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2021, 6:07 IST
Last Updated 25 ಮಾರ್ಚ್ 2021, 6:07 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್ 
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್    

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದ, ಗಲಾಟೆ, ಕೂಗಾಟ, ಹೊಡೆದಾಟ ಮುಂತಾದ ವಿಷಯಗಳಿಗೆ ಸುದ್ದಿಯಾಗುವ ಬಿಗ್ ಬಾಸ್ ಮನೆಯಲ್ಲಿ ಈಗ ಪ್ರೇಮದ ಪ್ರಸ್ತಾವ ಶುರುವಾಗಿದೆ. ಮನೆಯ ಸದಸ್ಯರು ಮತ್ತು ನಿರೂಪಕ ಕಿಚ್ಚ ಸುದೀಪ್ ಅವರ ಸಂಶಯವನ್ನು ನಿಜವಾಗಿಸುವ ಪ್ರಯತ್ನ ನಡೆಯುತ್ತಿದೆ.

ಅರವಿಂದ್–ದಿವ್ಯಾ ಉರುಡುಗ ಪ್ರೇಮಕ್ಕೆ ರಾಯಭಾರಿಯಾದ ಶುಭಾ ಪೂಂಜಾ: ಜೋಡಿ ಟಾಸ್ಕ್‌ನಿಂದಲೂ ಒಟ್ಟೊಟ್ಟಿಗೆ ನಲಿಯುತ್ತಾ ಓಡಾಡಿಕೊಂಡಿರುವ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಅವರ ನಡುವಿನ ಪ್ರೇಮ ವಿಚಾರದಲ್ಲಿ ಶುಭಾ ಪೂಂಜಾ ರಾಯಭಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ದಿವ್ಯಾ ಉರುಡುಗ ಅವರನ್ನು ಕೆಣಕಿ ಮನದಾಳದ ಮಾತುಗಳನ್ನು ಹೊರಹಾಕಿಸಿದ ಶುಭಾ ಈಗ ಅರವಿಂದ್ ಬಳಿ ಪ್ರಸ್ತಾವನೆ ಇಟ್ಟಿದ್ದಾರೆ.

ಅರವಿಂದ್ ನಿನಗೆ ಇಷ್ಟವಿದೆಯಾ? ಇದಕ್ಕೆ ಮನೆಯಲ್ಲಿ ಒಪ್ಪುತ್ತಾರಾ ಎಂದು ದಿವ್ಯಾ ಬಳಿ ಕೇಳಿದೆ. ಅದಕ್ಕವಳು, ಅರವಿಂದ್ ಅವರನ್ನು ಒಮ್ಮೆ ಕೇಳು ಅಂತಾ ಹೇಳಿದಳು ಎಂದು ಅರವಿಂದ್ ಬಳಿ ಶುಭಾ ಪೂಂಜಾ ಪ್ರಸ್ತಾವನೆ ಇಡುತ್ತಾರೆ. ಜೊತೆಗೆ, ನಿಮ್ಮಿಬ್ಬರಿಗೂ ನಾನು ಒಂದು ಮಾತು ಹೇಳುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ನಾವ್ ನಾವೇ ಇರುವುದರಿಂದ ಹತ್ತರವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಿಗ್ ಬಾಸ್ ಮನೆ ಬಿಟ್ಟು ಹೊರಗೆ ಹೋದ ಬಳಿಕ 6 ತಿಂಗಳು ನೋಡಿ. ಆ ಬಳಿಕ, ಪರಸ್ಪರ ಜೊತೆಯಾಗಿ ಮುನ್ನಡೆಯುವ ಇಚ್ಛೆ ಇದ್ದರೆ ಮುಂದುವರಿಯಿರಿ ಎಂದು ಸಲಹೆ ಕೊಟ್ಟರು.

ದಿವ್ಯಾ ಕ್ಯೂಟ್ ಅಂಡ್ ಕಂಪ್ಯಾಟಿಬಲ್ ಎಂದ ಅರವಿಂದ್: ಶುಭಾ ಪೂಂಜಾ ಮಾತಿಗೆ ಪಾಸಿಟಿವ್ ಆಗಿ ಉತ್ತರಿಸಿದ ಅರವಿಂದ್, ದಿವ್ಯಾ ತುಂಬಾ ಕ್ಯೂಟ್ ಆಗಿದ್ದಾರೆ. ಬೇರೆಯವರಿಗೆ ಹೋಲಿಸಿದರೆ ಅವಳು ನನ್ನ ಜೊತೆ ಹೊಂದಿಕೊಳ್ಳಬಲ್ಲ ಮನಸ್ಥಿತಿ ಹೊಂದಿದ್ದಾಳೆ ಎಂದರು. ಮನೆಯಿಂದ ಹೊರಹೋದ ಬಳಿಕ ಸ್ವಲ್ಪ ಸಮಯ ಕಳೆದು ನಿರ್ಧಾರ ಕೈಗೊಳ್ಳಿ ಎಂಬ ಶುಭಾ ಪೂಂಜಾ ಅವರ ಸಲಹೆಗೆ ಅರವಿಂದ್ ಸಹಮತ ಸೂಚಿಸಿದರು. ಅಲ್ಲದೆ, ಇದನ್ನೆಲ್ಲ ಮನೆಯವರು ನೋಡುತ್ತಿರುತ್ತಾರೆ. ಅವರೂ ನಮಗೆ ಜೋಡಿ ಹುಡುಕುವ ಹಾದಿಯಲ್ಲಿರುತ್ತಾರೆ. ಅಂತಿಮವಾಗಿ ನಮಗೇನು ಬೇಕು ಎನ್ನುವುದು ಮುಖ್ಯವಾಗುತ್ತದೆ ಎಂದು ಅರವಿಂದ್ ಅಭಿಪ್ರಾಯಪಟ್ಟರು.

ADVERTISEMENT

ನನಗೆ ಯಾವುದೇ ತೊಂದರೆ ಇಲ್ಲ. ನಾನು ಸಿನಿಮಾ ಉದ್ಯಮದಲ್ಲೂ ಇಲ್ಲ. ಅವಳು ಇಂಡಸ್ಟ್ರಿಯಲ್ಲಿ ಇದ್ದಾಳೆ. ನಮ್ಮಿಬ್ಬರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಆಗಾಗ್ಗೆ ಮಾತುಗಳು ಬಂದು ಹೋಗುತ್ತಿರುತ್ತವೆ. ನಿನ್ನೆ ಪ್ರಶಾಂತ್ ಕೇಳಿದಾಗಲೂ ಇದನ್ನೇ ಹೇಳಿದೆ. ಅವಳು ಕ್ಯೂಟ್ ಮತ್ತು ಮನೆಯಲ್ಲಿ ಎಲ್ಲರಿಗಿಂತಲೂ ನನಗೆ ಹೊಂದಿಕೊಳ್ಳುವವಳಾಗಿದ್ದಾಳೆ. ಆದರೆ, ಇನ್ನೂ ಮುಂದುವರಿಯುವ ಬಗ್ಗೆ ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಅರವಿಂದ್ ಹೇಳಿದರು. 25 ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುವುದು ಕಷ್ಟ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.