ADVERTISEMENT

Bigg Boss Kannada 10 | ಬಿಗ್‌ ಬಾಸ್‌ ಮನೆಯೊಳಗೆ ಮೌನಿಯಾದ ಡ್ರೋನ್‌ ಪ್ರತಾಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2023, 5:11 IST
Last Updated 10 ಅಕ್ಟೋಬರ್ 2023, 5:11 IST
<div class="paragraphs"><p>ಪ್ರತಾಪ್‌</p></div>

ಪ್ರತಾಪ್‌

   

ಚಿತ್ರ: ಫೇಸ್‌ಬುಕ್‌

ಬಹು ನಿರೀಕ್ಷೆಯ ಬಿಗ್‌ ಬಾಸ್‌ ರಿಯಾಲಿಟಿ ಶೋ ಭಾನುವಾರದಿಂದ ಪ್ರಾರಂಭವಾಗಿದ್ದು, 17 ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಅತಿಥಿಯಾಗಿ ಶಾಸಕ ಪ್ರದೀಪ್‌ ಈಶ್ವರ್‌ ಮನೆ ಪ್ರವೇಶಿಸಿದ್ದು, ಸ್ಪರ್ಧೆಯ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ.

ADVERTISEMENT

ಡ್ರೋನ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದ ಡ್ರೋನ್‌ ಪ್ರತಾಪ್‌ ಅವರು ಕೂಡ ಈ ಬಾರಿ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ತಾನೇನೆಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಈ ಶೋ ಆಯ್ಕೆ ಮಾಡಿದ್ದೇನೆ ಎಂದು ಸ್ವತಃ ಅವರು ಹೇಳಿಕೊಂಡಿದ್ದಾರೆ.

ಆದರೆ, ಬಿಗ್‌ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ ಪ್ರತಾಪ್‌ ಅವರು ಮೌನಕ್ಕೆ ಶರಣಾಗಿದ್ದಾರೆ. ಹಲವಾರು ವೇದಿಕೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಪ್ರತಾಪ್‌ ಅವರು ಮನೆಯೊಳಗೆ ಏಕಾಂಗಿ, ಮೌನಿಯಾಗಿರುವುದನ್ನು ಕಂಡು ಇತರ ಸ್ಪರ್ಧಿಗಳು ಅಚ್ಚರಿಪಟ್ಟಿದ್ದಾರೆ.

ನಿಮಗೆ ತುಂಬಾ ಇಷ್ಟವಾದ ಮತ್ತು ಇಷ್ಟವಲ್ಲದ ಸರ್ಧಿಯ ಹೆಸರು ಹೇಳುವಂತೆ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದಾಗ, ಹೆಚ್ಚಿನ ಸ್ಪರ್ಧಿಗಳು ಪ್ರತಾಪ್‌ ಅವರನ್ನು ಇಷ್ಟವಾಗದ ವ್ಯಕ್ತಿ ಎಂದು ಹೇಳಿದ್ದಾರೆ. ಅದಕ್ಕೆ ಅವರೆಲ್ಲ ನೀಡಿದ ಕಾರಣ ಪ್ರತಾಪ್‌ ಅವರ ಮೌನ.

ಸ್ಪರ್ಧಿಗಳ ನಿರ್ಧಾರವನ್ನು ಸಮ್ಮತಿಸಿರುವ ಪ್ರತಾಪ್‌, ಡ್ರೋನ್‌ ವಿಚಾರಕ್ಕೆ ಮಾನಸಿಕವಾಗಿ ಕುಗ್ಗಿದ್ದು, ಇದೆಲ್ಲದರಿಂದ ಹೊರ ಬರಲು ಸಮಯ ಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಬೆರೆಯುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.