ADVERTISEMENT

BBK 10 | ಬಿಗ್‌ ಬಾಸ್ ಪಯಣದ ಬಗ್ಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2024, 11:32 IST
Last Updated 30 ಜನವರಿ 2024, 11:32 IST
<div class="paragraphs"><p>ಸಂಗೀತಾ ಶೃಂಗೇರಿ</p></div>

ಸಂಗೀತಾ ಶೃಂಗೇರಿ

   
‘ಕೋಟಿ ಕೊಟ್ಟರೂ ಬಿಗ್‌ ಬಾಸ್ ಮನೆಗೆ ಹೋಗಲ್ಲ’ ಎಂದು ಹೇಳಿ ಬಿಗ್‌ ಬಾಸ್ ಮನೆ ಪ್ರವೇಶಸಿದ್ದ ಸಂಗೀತಾ ಶೃಂಗೇರಿ, ಈ ಸೀಸನ್‌ನ ಎರಡನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ. ನೇರ ಮಾತು, ದಿಟ್ಟ ವ್ಯಕ್ತಿತ್ವದಿಂದಲೇ ಅಭಿಮಾನಿಗಳನ್ನು ಪಡೆದಿದ್ದ ಸಂಗೀತಾ ಅವರ ಬಿಗ್‌ ಬಾಸ್ ಪಯಣ ತುಂಬಾ ರೋಚಕವಾಗಿತ್ತು. ಜಿಯೊ ಸಿನೆಮಾ ನಡೆಸಿದ ಸಂದರ್ಶನದಲ್ಲಿ ತಮ್ಮ ಪಯಣದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ವಿನ್ನರ್‌ ಆಗದೆ ಇರುವುದಕ್ಕೆ ಬೇಜಾರಿದೆಯಾ?

ಖಂಡಿತ ಬೇಜಾರಿದೆ. ಆದರೆ ನಾನು ಖುಷಿಯಾಗಿದ್ದೇನೆ. ಏಕೆಂದರೆ ಈ ಜರ್ನಿ ಅಷ್ಟು ಅದ್ಭುತವಾಗಿತ್ತು. ಈ ಪಯಣ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ‘ನೆವರ್ ಕ್ವಿಟ್; ಹ್ಯಾವ್ ಹೋಪ್‌‘ ಎಂಬ ಪಾಠವನ್ನು ಈ ಮನೆ ಕಲಿಸಿದೆ. ಇದನ್ನು ಮುಂದೆಯು ಪಾಲಿಸಿಕೊಂಡು ಹೋಗುತ್ತೇನೆ. ಈ ಮನೆಯಲ್ಲಿ ಸಾಕಷ್ಟು ಕಲಿತಿದ್ದೀನಿ. ಬದುಕಿನಲ್ಲಿಯೂ ಸಾಕಷ್ಟು ಕಲಿಯುವುದಿದೆ. ನಾನು ಯಾವತ್ತೂ ಸಮಸ್ಯೆಗಳಿಂದ ಓಡಿಹೋಗುವುದಿಲ್ಲ. ಧೈರ್ಯದಿಂದ ಎದುರಿಸುತ್ತೇನೆ.

ADVERTISEMENT

ಯಾರು ಫೇಕ್, ಯಾರು ಜೆನ್ಯೂನ್‌?

ಮನೆಯೊಳಗೆ ಎಲ್ಲರೂ ಅವರವರ ಆಟವನ್ನು ಜೆನ್ಯೂನ್ ಆಗಿಯೇ ಆಡಿದ್ದಾರೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ನಾನು ನನ್ನ ಗೇಮ್‌ ಅನ್ನು ಗೇಮ್‌ ಅಂತಷ್ಟೇ ಆಡಿಲ್ಲ, ಅದನ್ನು ಬದುಕಿದ್ದೀನಿ. ಬೇರೆಯವರ ಬಗ್ಗೆ ಮಾತನಾಡಲು ನಾನು ಹೋಗುವುದಿಲ್ಲ. ಅಲ್ಲಿ ಉಳಿದುಕೊಳ್ಳಬೇಕು ಅಂದರೆ ಎಲ್ಲರೂ ಅವರವರ ವ್ಯಕ್ತಿತ್ವವನ್ನು ತೋರಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಅವರನ್ನು ಫೇಕ್ ಅನ್ನಲು ಸಾಧ್ಯವಿಲ್ಲ.

ಈ ಸೀಸನ್‌ ಬಗ್ಗೆ ಏನು ಹೇಳುತ್ತೀರಿ?

ಎಲ್ಲ ಸೀಸನ್‌ಕ್ಕಿಂತ ಈ ಸಲದ ಸೀಸನ್‌ ಡಿಫರೆಂಟ್‌ ಆಗಿತ್ತು. ಕಳೆದ ಸೀಸನ್‌ಗಳಲ್ಲಿ ಯಾರು ಯಾರಿಗೆ ವೋಟ್ ಮಾಡಿದ್ದಾರೆ ಎಂದು ಗೊತ್ತಾಗುತ್ತಿರಲಿಲ್ಲ.ಆದರೆ ಈ ಬಾರಿ ಮುಖದ ಮೇಲೇ ಹೇಳುವುದರಿಂದ ನಮಗೂ ಗೊತ್ತಿರುತ್ತಿತ್ತು, ಇವರಿಗೆ ನಾವು ಇಷ್ಟ, ಇವರಿಗೆ ಇಷ್ಟ ಇಲ್ಲ ಅಂತ. ಅಲ್ಲದೆ ಪ್ರತಿ ಸಲ ಟಾಸ್ಕ್ ಕೊಡುವಾಗಲೂ ತುಂಬ ಕ್ರಿಯೇಟೀವ್ ಆಗಿ ವ್ಯಕ್ತಿತ್ವವನ್ನು ಹೈಲೈಟ್ ಮಾಡುವ ರೀತಿಯಲ್ಲಿ ಟಾಸ್ಕ್‌ ಕೊಡುತ್ತಿದ್ದರು. ಒಂದೊಂದು ವಾರ ಆಗುತ್ತಿರುವ ಹಾಗೆ ಎಲ್ಲರ ವ್ಯಕ್ತಿತ್ವದ ಒಂದೊಂದು ಛಾಯೆ ಎದ್ದು ಕಾಣಿಸುತ್ತಿತ್ತು.

ಪ್ರತಾಪ್‌ ಬಗ್ಗೆ ಏನು ಹೇಳುತ್ತೀರಿ?

ಪ್ರತಾಪ್‌ ಮತ್ತು ನನ್ನದು ಅಕ್ಕ ತಮ್ಮನ ಬಾಂಡ್‌ ಎಂದು ಎಲ್ಲರೂ ಹೇಳುತ್ತಾರೆ. ಮೊದಲಿನಿಂದಲೂ ನಮ್ಮ ನಡುವೆ ತುಂಬ ಆಳವಾದ ಸ್ನೇಹ ಇತ್ತು. ಪ್ರಾರಂಭದಿಂದಲೂ ನಾನು ಅವನಿಗೆ ಬೆಂಬಲವಾಗಿ ನಿಂತಿದ್ದೆ. ಕೆಲ ಕಾಲ ನಮ್ಮ ನಡುವೆ ಮನಸ್ತಾಪ ಬಂದಿತ್ತು. ಮನಸ್ತಾಪ ಬಂದರೂ ನಾವು ಸರಿ ಹೋದೆವು. ಯಾಕೆಂದರೆ ನಮ್ಮ ಬಾಂಡಿಂಗ್ ಹಾಗಿತ್ತು. ಆ ಪ್ರೀತಿ ಯಾವತ್ತೂ ಕಡಿಮೆ ಆಗಿಲ್ಲ.

ತನಿಶಾ, ಕಾರ್ತಿಕ್‌ ಬಗ್ಗೆ?

ನಾನು ಸ್ನೇಹ ಮಾಡಿಕೊಳ್ಳುವುದು ತುಂಬಾ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಶಾ ಜೊತೆಗೆ ಸ್ನೇಹವಾಯಿತು. ಸಡನ್ ಆಗಿ ಆದ ಫ್ರೆಂಡ್‌ಷಿಪ್ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಸಾಕಷ್ಟು ಇರುತ್ತವೆ. ಇದು ಹಾಗೇ ಆಯ್ತು. ನನ್ನ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆದು ಕೊನೆಯವರೆಗೂ ಅದು ಮುಂದುವರಿಯಿತು. ಅವರ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದರೂ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ಅದೆಲ್ಲ ಬಿಟ್ಟು ಅವರನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ವಿನ್ನರ್ ಆಗಿದ್ದಕ್ಕೆ ಕಾರ್ತಿಕ್‌ ಅವರಿಗೆ ಅಭಿನಂದನೆ ಹೇಳುತ್ತೇನೆ.

ವಿನಯ್‌ ಬಗ್ಗೆ ಬೇಜಾರಿದೆಯಾ?

ಖಂಡಿತ ಇಲ್ಲ. ವಿನಯ್ ನಾನು ಈ ಮೊದಲು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆವು. ಅಲ್ಲಿಯೂ ನನಗೂ ಅವರಿಗೂ ಸುಮಾರು ಗಲಾಟೆಗಳು ನಡೆದಿವೆ. ಅವರೊಬ್ಬ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿ. ಸ್ವಲ್ಪ ಗಲಾಟೆಗಳು ಆಗುತ್ತವೆ. ನಾನೂ ಸ್ವಲ್ಪ ನೇರ ವ್ಯಕ್ತಿತ್ವದವಳು. ಮುಖದ ಮೇಲೇ ಹೇಳುತ್ತೇನೆ. ಹಾಗಾಗಿಯೇ ಸ್ವಲ್ಪ ಗಲಾಟೆಗಳು ನಡೆಯುತ್ತಿತ್ತು. ಅದೇ ರೀತಿ ಮನೆಯಲ್ಲಿಯೂ ಗಲಾಟೆಗಳು ಆಗಿವೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಪರಸ್ಪರರ ಬಗ್ಗೆ ನಮಗೆ ಗೌರವ ಇದೆ. ಅದು ಯಾವತ್ತೂ ಇರುತ್ತದೆ ಎಂದು ಭಾವಿಸುತ್ತೇನೆ.

ಬಿಗ್‌ ಬಾಸ್‌ ಮನೆಯಿಂದ ಏನು ಮಿಸ್‌ ಮಾಡ್ಕೋಳ್ತಿರಾ?

ಬಾತ್‌ರೂಮ್‌ ಏರಿಯಾ ಮತ್ತು ಟ್ರಿಯನ್ನು ಮಿಸ್ ಮಾಡ್ಕೋತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡಿಯನ್ನು ಮಿಸ್ ಮಾಡ್ಕೋತೀನಿ. ನನ್ನ ಅರ್ಧ ಜರ್ನಿಯನ್ನು ನಾನು ಅದರ ಜೊತೆಗೇ ಕಳೆದಿದ್ದೇನೆ. ಅಲ್ಲಿರುವ ದೇವಿ ವಿಗ್ರಹವನ್ನು ಮಿಸ್ ಮಾಡ್ಕೋತೀನಿ. ಅದರಿಂದ ತುಂಬ ಶಕ್ತಿ ಪಡೆದುಕೊಂಡಿದ್ದೇನೆ.

ಫಿನಾಲೆಗೆ ಬಂದ ಕ್ಷಣ ಹೇಗಿತ್ತು?

ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಿದ್ದರು, ಐದಲ್ಲ. ಆರರಿದ ಟಾಪ್‌ 5 ಸೆಲೆಕ್ಟ್ ಆದಾಗಲೂ ಸಾಕಷ್ಟು ಎಕ್ಸೈಟ್‌ಮೆಂಟ್ ಇತ್ತು. ನಾಲ್ಕರಿಂದ ಮೂರು ಬಂದ ನಂತರ ಸುದೀಪ್ ಅವರೇ ಮನೆಯೊಳಗೆ ಬಂದು ನಮ್ಮನ್ನು ಕರೆದುಕೊಂಡು ಹೋದರು. ಇದು ನನ್ನ ಬದುಕಿನಲ್ಲಿಯೇ ಅತ್ಯುತ್ತಮ ಅನುಭವ. ವೇದಿಕೆಯ ಮೇಲೆ ಮೂರು ಬಾಕ್ಸ್‌ಗಳಿದ್ದವು. ಆ ಬಾಕ್ಸ್‌ನಲ್ಲಿ ಒಂದು ರೆಡ್ ಆಗುತ್ತೆ ಅಂತ ಹೇಳಿದರು. ಅದು ನನ್ನ ಬಾಕ್ಸ್‌ ಆಗಿತ್ತು.

ಬಿಗ್‌ ಬಾಸ್ ಜರ್ನಿ ಹೇಗಿತ್ತು?

ಮೊದಮೊದಲು ನಾನು ಯಾವಾಗ ಹೊರಗೆ ಬರ್ತಿನಿ ಅಂತ ಕಾಯುತ್ತಿದೆ. ಯಾಕೆಂದರೆ ಕೊನೆಯ ಕೆಲವು ವಾರಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಇಡೀ ಮನೆಯೇ ನನ್ನ ವಿರುದ್ಧವಿತ್ತು. ಎಲ್ಲರ ಎದುರಿನಲ್ಲಿಯೂ ನಾನು ಪ್ರೂವ್ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೂ ಇದೊಂದು ಅದ್ಭುತ ಜರ್ನಿ. ಈ ಮನೆ ನನಗೆ ತುಂಬಾ ಪಾಠಗಳನ್ನು ಕಲಿಸಿದೆ. ಇದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.