ADVERTISEMENT

BBK11: ಕುತಂತ್ರದಿಂದ ಹಂಸಾ ಕ್ಯಾಪ್ಟನ್‌ ಆದ್ರಾ?; ಸುದೀಪ್‌ ಎದುರು ಸತ್ಯ ಬಯಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2024, 7:39 IST
Last Updated 6 ಅಕ್ಟೋಬರ್ 2024, 7:39 IST
   

ಬೆಂಗಳೂರು: ಬಿಗ್‌ ಬಾಸ್‌ 11 ನೇ ಆವೃತ್ತಿಯಲ್ಲಿ ಮೊದಲನೇ ವಾರದ ಕ್ಯಾಪ್ಟನ್‌ ಆಗಿ ಹಂಸಾ ಆಯ್ಕೆಯಾಗಿದ್ದಾರೆ. ಆದರೆ ಹಂಸಾ ಕುತಂತ್ರದಿಂದ ಕ್ಯಾಪ್ಟನ್‌ ಪಟ್ಟಕ್ಕೇರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

ನರಕ ನಿವಾಸಿ ರಂಜಿತ್‌ ಅವರು ಹಂಸಾ ಪರ ಆಟವಾಡಿ ಗೆದ್ದಿದ್ದರು. ಈ ಮೂಲಕ ಹಂಸಾ 11ನೇ ಆವೃತ್ತಿಯ ಬಿಗ್‌ ಬಾಸ್‌ ಮನೆಯ ಮೊದಲ ಕ್ಯಾಪ್ಟನ್‌.

ಹಂಸಾ ಪರವಾಗಿ ರಂಜಿತ್‌ ಆಟವಾಡಲು ಕಾರಣ ಏನು ಎನ್ನುವುದು ಕಿಚ್ಚನ ಪಂಚಾಯ್ತಿಯಲ್ಲಿ ಬಹಿರಂಗವಾಗಿದೆ. 

ADVERTISEMENT

ಹಂಸಾ ಅವರು ತಾನು ಕ್ಯಾಪ್ಟನ್‌ ಆದರೆ ನರಕ ನಿವಾಸಿಗಳಿಗೆ ಹೆಚ್ಚು ಸೌಲಭ್ಯ ಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಕ್ಯಾಪ್ಟನ್‌ಗೆ ಇರುವ ಸ್ವರ್ಗ–ನರಕ ನಿವಾಸಿಗಳನ್ನು ಅದಲುಬದಲು ಮಾಡುವ ಅಧಿಕಾರಿ ಬಳಸಿಕೊಂಡು ನರಕ ನಿವಾಸಿಗಳನ್ನು ಹೊರಕ್ಕೆ ಕರೆತರುವುದಾಗಿ ಹೇಳಿದ್ದರು ಈ ಕಾರಣಕ್ಕೆ ರಂಜಿತ್ ಅವರು ಆಟವಾಡಿದ್ದಾರೆ ಎಂದು ಗೊತ್ತಾಗಿದೆ. 

ಇದಕ್ಕೆ ಪೂರಕವಾಗಿ ಆಟದ ಸಂದರ್ಭದಲ್ಲಿ ರಂಜಿತ್‌ಗೆ ಹಂಸಾ ಕಡೆ ಗುರುತಿಸಿಕೊಂಡಿದ್ದ ಸ್ಪರ್ಧಿಗಳು ಏನೂ ತೊಂದರೆ ಕೊಡದೆ ಬೆಂಬಲ ಸೂಚಿಸಿದ್ದರು. ಹೀಗಾಗಿ ರಂಜಿತ್‌ ಗೆದ್ದು ಹಂಸಾ ಕ್ಯಾಪ್ಟನ್‌ ಆಗಿದ್ದಾರೆ.

ಹಂಸಾಗೆ ಸುದೀಪ್‌ ಕ್ಲಾಸ್‌

ಕ್ಯಾಪ್ಟನ್‌ ಆದವರಿಗೆ ಸರಿಯಾದ ನಿಯಮ ಗೊತ್ತಿರಬೇಕು, ಸರಿಯಾಗಿ ನಿರ್ವಹಿಸುವ ಕಲೆ ಗೊತ್ತಿರಬೇಕು ಎಂದು ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅನುಮತಿ ಇಲ್ಲದೆ ಇದ್ದರೂ ನರಕ ನಿವಾಸಿಗಳಿಗೆ ಸ್ವರ್ಗ ನಿವಾಸಿಗಳ ಜಾಗದಲ್ಲಿ ಬಂದು ಮೇಕಪ್‌ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಅನಗತ್ಯವಾಗಿ ಅವರಿಗೆ ಬಾಗಿಲು ತೆರೆದಿದ್ದು ತಪ್ಪು. ಕ್ಯಾಪ್ಟನ್‌ ಆದಮೇಲೆ ಸೌಲಭ್ಯಗಳನ್ನು ಬಳಸಿಕೊಂಡಂತೆ, ನಿಯಮಗಳನ್ನೂ ಪಾಲಿಸಬೇಕಿತ್ತು ಎಂದು ಹಂಸಾ ಅವರನ್ನು ಸುದೀಪ್‌ ತರಾಟೆಗೆ ತೆಗೆದುಕೊಂಡಿದ್ದರು. ಸುದೀಪ್‌ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹಂಸಾ ಅವರು ಗಲಿಬಿಲಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.