ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮ 51ನೇ ದಿನಕ್ಕೆ ಕಾಲಿಟ್ಟಿದ್ದು ಅನುಷಾ ಎಲಿಮಿನೇಟ್ ಆಗಿದ್ದಾರೆ. ಅದರ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಕ್ಕೆ ಹೋಗಿದ್ದಾರೆ.
ತೆಲುಗು ಬಿಗ್ ಬಾಸ್ನಲ್ಲಿ ಭಾಗವಹಿಸಿದ್ದ ಕನ್ನಡ ನಟಿ ಶೋಭಾ ಶೆಟ್ಟಿ ಮತ್ತು ಕನ್ನಡ ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ರಜತ್ ಕಿಶನ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.
ಮನೆಯಲ್ಲಿದ್ದವರ ಮುಖವಾಡ ಕಳಚುತ್ತೇನೆ ಎಂದು ಸವಾಲು ಹಾಕಿರುವ ಶೋಭಾ ಒಂದೆಡೆಯಾದರೆ, ಸ್ಪರ್ಧಿಗಳ ಹೆಸರನ್ನೇ ಹೇಳಿ ನೇರವಾಗಿ ಟಾರ್ಗೆಟ್ ಮಾಡಿರುವ ರಜತ್ ಇನ್ನೊಂದೆಡೆ.
ಹೊಸದಾಗಿ ಮನೆ ಸೇರಿದ ಸ್ಪರ್ಧಿಗಳನ್ನು ನೋಡಿ ಮನೆಯ ಸದಸ್ಯರು ಗಲಿಬಿಲಿಗೊಂಡಿದ್ದಾರೆ.
ಇವೆಲ್ಲದರ ನಡುವೆ ಸೋಮವಾರ ನಡೆಯಲಿರುವ ನಾಮಿನೇಷನ್ನಲ್ಲಿ ಕೋಲಿನಿಂದ ಮಡಿಕೆ ಒಡೆಯುವ ಮೂಲಕ ನಾಮಿನೇಟ್ ಮಾಡಿದ್ದಾರೆ. ತ್ರಿವಿಕ್ರಮ್, ಮೋಕ್ಷಿತಾ ಮತ್ತು ಮಂಜು ನಡುವೆ ಮಾತಿನ ಚಕಮಕಿ ನಡೆದಿದೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.