ADVERTISEMENT

Bigg Boss Kannada 10 | ಡ್ರೋನ್ ಪ್ರತಾಪ್ ರೊಟ್ಟಿ ಪ್ರತಾಪ್ ಆದ್ರಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2023, 12:51 IST
Last Updated 12 ಅಕ್ಟೋಬರ್ 2023, 12:51 IST
<div class="paragraphs"><p>ಚಿತ್ರಕೃಪೆ: ಜಿಯೋ ಸಿನಿಮಾ</p></div>

ಚಿತ್ರಕೃಪೆ: ಜಿಯೋ ಸಿನಿಮಾ

   

ಬೆಂಗಳೂರು: ಬಿಗ್‌ಬಾಸ್‌ ಮನೆಯೊಳಗೆ ಆಟದ ಜತೆ ಜತೆಗೆ ಹಾಸ್ಯದ ರಸದೌತಣಕ್ಕೆ ಏನೂ ಕಡಿಮೆ ಇರುವುದಿಲ್ಲ. ಇದೀಗ ಬಿಗ್‌ ಬಾಸ್‌ 10ರ ಸೀಸನ್‌ನಲ್ಲೂ ದೊಡ್ಮನೆ ಮಂದಿ ಒಬ್ಬನೊಬ್ಬರು ಕಾಲೆಳೆಯುತ್ತಾ ಸಮಯ ಕಳೆಯುತ್ತಿದ್ದಾರೆ.

ಬಿಗ್‌ ಬಾಸ್‌ ಮನೆ ಪ್ರವೇಶಿದಾಗ ಮೌನಕ್ಕೆ ಶರಣಾಗಿದ್ದ ಡ್ರೋನ್ ಪ್ರತಾಪ್‌ ಇದೀಗ ಎಲ್ಲರೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ಸದ್ಯ ಅವರು ಮನೆಮಂದಿಯ ಹಾಸ್ಯಕ್ಕೆ ಒಂದು ಒಳ್ಳೆಯ ಸರಕಾಗಿದ್ದಾರೆ.

ADVERTISEMENT

ಡ್ರೋನ್‌ ಪ್ರತಾಪ್‌ ಅವರು ಮನೆಯ ಇತರ ಮಹಿಳಾ ಸ್ಪರ್ಧಿಗಳೊಂದಿಗೆ ಮಾತನಾಡುವುದನ್ನು ತುಕಾಲಿ ಸಂತೋಷ್‌ ಅವರು ಆಡಿಕೊಂಡಿದ್ದಾರೆ.

ದೀದಿ ಎಂದು ಸಂಗೀತಾ ಶೃಂಗೇರಿ ಬಳಿ ಮಾತನಾಡುವ ಪ್ರತಾಪ್‌ ಅವರ ಹಾವಭಾವವನ್ನು ತುಕಾಲಿ ಮಿಮಿಕ್ರಿ ಮಾಡಿದ್ದಾರೆ. ನಮ್ರತಾ ಗೌಡ ಹಾಗೂ ತನಿಷಾ ಅವರೊಂದಿಗೆ ಮಾತನಾಡುವುದನ್ನೂ ಹೇಳುತ್ತಾ ಸಖತ್‌ ಕಾಮಿಡಿ ಮಾಡಿದ್ದಾರೆ.

ಡ್ರೋನ್‌ ಬಿಟ್ಟು ಈಗ ರೊಟ್ಟಿ ಚೆನ್ನಾಗಿ ತಟ್ಟುತ್ತಿದ್ದಾರೆಂದು ಪ್ರತಾಪ್‌ ಎಂದು ತುಕಾಲಿ ಹೇಳಿದ್ದು, ಇದಕ್ಕೆ ಸ್ನೇಹಿತ್‌ ಗೌಡ, ವಿನಯ್‌ ಗೌಡ, ರಕ್ಷಕ್‌ ಧ್ವನಿ ಗೂಡಿಸಿದ್ದಾರೆ.

ಪ್ರತಾಪ್‌ ಇನ್ಮುಂದೆ ಮಹಿಳಾ ಸ್ಪರ್ಧಿಗಳೊಂದಿಗೆ ಇಷ್ಟೇ ಸಲುಗೆಯಿಂದ ಇರ್ತಾರೋ, ಇಲ್ಲವೋ ಎಂದು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

ನಮ್ರತಾ ಗೌಡ, ಡ್ರೋನ್​ ಪ್ರತಾಪ್, ಅಭಿನವ್​ ವಿಶ್ವನಾಥನ್​, ಗೌರೀಶ್​ ಅಕ್ಕಿ, ರಕ್ಷಕ್​ ಬುಲ್ಲೆಟ್​, ಸಂಗೀತಾ ಶೃಂಗೇರಿ, ತನಿಷಾ, ವಿನಯ್​ ಗೌಡ, ಕೋಮಲ್ ಸ್ನೇಕ್​ ಶ್ಯಾಮ್, ನೀತು ವನಜಾಕ್ಷಿ ಸೇರಿದಂತೆ 17 ಮಂದಿ ಬಿಗ್​ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ JioCinemaದಲ್ಲಿ 24ಗಂಟೆ ಉಚಿತವಾಗಿ ಪ್ರಸಾರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.