ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ರೀ ಎಂಟ್ರಿಯಾಗಿದೆ. ಮನೆಯ ಸದಸ್ಯರಿಗೆ ಹಳ್ಳಿಮನೆ ಟಾಸ್ಕ್ ನೀಡಲಾಗಿದೆ. ಹಳ್ಳಿ ಜನರಂತೆ ಉಡುಪು ಧರಿಸಿ, ಪಕ್ಕಾ ಹಳ್ಳಿಯ ಮನೆಗಳಂತೆ ಬಿಗ್‌ಬಾಸ್ ಮನೆ ಸಜ್ಜುಗೊಂಡಿದೆ.
ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಿದ ಹಳ್ಳಿಮನೆ ಟಾಸ್ಕ್ ನೀಡಲಾಗಿದೆ. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು ಎಂದು ಹೇಳಲಾಗಿದ್ದು, ಸಂಗೀತಾ ಮತ್ತು ವಿನಯ್ ಒಂದೊಂದು ಕುಟುಂಬದ ಮುಖ್ಯಸ್ಥರಾಗಿದ್ದಾರೆ. ಅದರ ಪ್ರಕಾರವೇ ಟಾಸ್ಕ್ ಆರಂಭಗೊಂಡಿದೆ. ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಆರಂಭಗೊಂಡಿತ್ತು.
ಆದರೆ ಟಾಸ್ಕ್‌ನಲ್ಲಿ ಮಣ್ಣಿನ ಪಾತ್ರೆಗಳನ್ನು ಮಾಡುವ ಸವಾಲನ್ನು ನೀಡಲಾಗಿತ್ತು. ಅದರಲ್ಲಿ ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು ಎಂಬ ನಿಯಮವನ್ನು ಇಡಲಾಗಿತ್ತು. ಟಾಸ್ಕ್ ವಿನ್ ಆಗಲು ಒಬ್ಬರು ಮಾಡಿದ ಪಾತ್ರೆಗಳನ್ನು ಇನ್ನೊಬ್ಬರು ಕಿತ್ತುಕೊಳ್ಳಲು ಯತ್ನಿಸಿದ್ದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ -ನಮ್ರತಾ ಹಾಗೂ ವಿನಯ್ -ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿದೆ.
ಜಿಯೊ ಸಿನಿಮಾದಲ್ಲಿ 24ಗಂಟೆಯೂ ಉಚಿತವಾಗಿ ನೇರಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಸ್ಪರ್ಧಿಗಳೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟ ಕನ್ನಡದ ಹಬ್ಬವನ್ನು ಖುಷಿಯಾಗಿ ಆಚರಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.