ಬೆಂಗಳೂರು: ಬಿಗ್‌ಬಾಸ್ ಮನೆಗೆ ಪವಿ ಮತ್ತು ಅವಿನಾಶ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ ಹೊಸದೊಂದು ಗಾಳಿ ಬೀಸುತ್ತಿದೆ. ಹೊಸ ಸ್ಪರ್ಧಿಗಳ ಜೊತೆಗಿನ ಒಡನಾಟ, ಮನೆಯೊಳಗಿನ ಗುಂಪುಗಳ ಸಮತೋಲವನ್ನು ತಪ್ಪಿಸುತ್ತಿದೆ. ಟಾಸ್ಕ್‌ಗಳನ್ನು ದಿಕ್ಕು ದೆಸೆಗಳನ್ನು ಬದಲಿಸುತ್ತಿದೆ. ಅಷ್ಟೇ ಅಲ್ಲ, ಟಫ್ ಟಾಸ್ಕ್‌ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್‌ಗಳು ಎದುರಾಗುತ್ತಿವೆ.
ಬಿಗ್ ಬಾಸ್ ಮನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮದ ಟಾಸ್ಕ್ ನೀಡಲಾಗಿದೆ. ತುಕಾಲಿ ಸಂತೋಷ್ ಮತ್ತು ಮೈಕಲ್ ಇಬ್ಬರೂ ಕೇಕ್ ಅನ್ನು ತಿನ್ನುತ್ತಿದ್ದಾರೆ. ಯಾರು ಮೊದಲು ತಿಂದು ತಮ್ಮ ತಲೆಮೇಲೆ ಕಟ್ಟಿಕೊಂಡಿರುವ ಗಂಟೆಯನ್ನು ಬಾರಿಸುತ್ತಾರೋ ಅವರಿಗೆ ಮಾತ್ರ ಪ್ರಶ್ನೆಯನ್ನು ಕೇಳುವ ಅಧಿಕಾರ ಸಿಗುತ್ತದೆ.
ಈ ಆಟದಲ್ಲಿ ಮೈಕಲ್ ಮೊದಲು ತಿಂದು ತಲೆ ಮೇಲಿನ ಗಂಟೆ ಬಾರಿಸಿದ್ದಾರೆ. ಅವರ ಮೊದಲ ಪ್ರಶ್ನೆಯಾಗಿ ‘ಯಾರ ಜನ್ಮದಿನವನ್ನು ಮಕ್ಕಳ ಜನ್ಮದಿನಾಚರಣೆಯನ್ನಾಗಿ ಆಚರಿಸುತ್ತಾರೆ?’ ಎಂದು ಕೇಳಿದ್ದಾರೆ.
ಇಷ್ಟು ಸುಲಭದ ಪ್ರಶ್ನೆಗೆ ಅಷ್ಟೇ ಉತ್ಸಾಹದಿಂದ ಎದ್ದು ನಿಂತ ಅವಿನಾಶ್ ಶೆಟ್ಟಿ, ‘ನವೆಂಬರ್ 14’ ಎಂದು ಕಿರುಚಿದ್ದಾರೆ! ಪ್ರಶ್ನೆಯನ್ನೇ ಅರ್ಥಮಾಡಿಕೊಳ್ಳದೆ ಉತ್ತರಿಸಿದ ಅವಿನಾಶ್ ಮುಖ ನೋಡಿ ಎಲ್ಲರೂ ನಕ್ಕಿದ್ದಾರೆ.
ಮೈಕಲ್ ಕನ್ನಡ ಪ್ರೀತಿ
ರಸಪ್ರಶ್ನೆ ಕೇಳುವ ವೇಳೆ ಮೈಕಲ್ ಕನ್ನಡದಲ್ಲಿರುವ ಪ್ರಶ್ನೆಯನ್ನು ಸುಲಭವಾಗಿ ಓದಿದ್ದಾರೆ. ಮೈಕಲ್ ಕನ್ನಡ ಸ್ಪಷ್ಟತೆ ಕಂಡು ಸ್ಪರ್ಧಿಗಳೇ ಅಚ್ಚರಿಗೊಂಡಿದ್ದಾರೆ. ಮೈಕಲ್ ನೋಡಿ ವಿನಯ್ ಏನು ಹೀಗೆಲ್ಲಾ ಕನ್ನಡ ಒದುತ್ತಿದ್ದೀರಾ ಎಂದಿದ್ದಾರೆ. ಅದಕ್ಕೆ ಮೈಕಲ್ ಹೆಮ್ಮೆಯಿಂದ ‘ಮಣ್ಣಿನ ಮಗ ಯಾರು, ಅವನಾ ನಾನಾ?’ ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.