ಬೆಂಗಳೂರು: ವಾರ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್, ಟಾಸ್ಕ್, ಗುಂಪುಗಾರಿಕೆ ಜೋರಾಗುತ್ತಲೇ ಇದೆ. ಈ ವಾರ ಒಟ್ಟು 6 ಜನ ನಾಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಹಾಗೂ ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿದ್ದಾರೆ.
ಎರಡನೇ ವಾರ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದ್ದು ಮಾಣಿಕ್ಯ ತಂಡಕ್ಕೆ ವಿನಯ್‌ಗೌಡ ನಾಯಕನಾದರೆ, ಶಕ್ತಿ ತಂಡಕ್ಕೆ ಕಾರ್ತಿಕ್ ನಾಯಕರಾಗಿದ್ದಾರೆ.
ಟಾಸ್ಕ್ ಮಧ್ಯೆ ಕಿರುಚಾಡಿದ ತನಿಷಾ
ಬಾಕ್ಸ್‌ವೊಂದರ ಮೇಲೆ ತಂತ್ರಗಾರಿಕೆ ಬಳಿಸಿ ಅತಿ ಹೆಚ್ಚು ಜನರು ನಿಲ್ಲಬೇಕೆಂಬ ಟಾಸ್ಕ್ ನೀಡಲಾಗಿತ್ತು. ಈ ವೇಳೆ ತನಿಷಾ ಮತ್ತು ವಿನಯ ಗೌಡ ಮಧ್ಯೆ ಮಾತಿನ ಯುದ್ಧ ನಡೆದಿದ್ದು,‘ನಾವೇನು ಬಿಕಾರಿಗಳಲ್ಲ’ ಎಂದು ತನಿಷಾ ಕೂಗಾಡಿದ್ದಾರೆ. ಇವೆಲ್ಲದರ ಮಧ್ಯೆ ತುಕಾಲಿ ಸಂತೋಷ್ ಕೂಡ ಜಗಳವಾಡಿದ್ದಾರೆ.
ನಿನ್ನೆ (ಸೋಮವಾರ) ಟಾಸ್ಕ್‌ಗಳ ಬಳಿಕ ಮಧ್ಯೆ ಡ್ರೋನ್ ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಧ್ಯೆ ದೊಡ್ಡ ಕಾಳಗವೇ ನಡೆದಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಕಾರ್ತಿಕ್, ‘ಹೇಳೋರು ಕೇಳೊರು ಇಲ್ಲಾ ಅಂತಾ ಕೂಗಾಡೋದು ಬೇಡ’ ಎನ್ನುವ ಮೂಲಕ ಪರೋಕ್ಷವಾಗಿ ಪ್ರತಾಪ್‌ಗೆ ಸಪೋರ್ಟ್ ಮಾಡಿದ್ದಾರೆ.
ಈ ಮಧ್ಯೆ ಸಂಗೀತಾ ಶೃಂಗೇರಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಣ್ಣೀರು ಸುರಿಸಿದ್ದಾರೆ. ಅಲ್ಲದೆ ಮಾಣಿಕ್ಯ ತಂಡದಿಂದ ಸಗಣಿ ನೀರು ಸುರಿಸಿಕೊಂಡು, 15 ನಿಮಿಷ ನಿಂತಿದ್ದರು.
ಹೆಚ್ಚಿದ ಡ್ರೋನ್ ಪ್ರತಾಪ್ ಪರ ಬೆಂಬಲ
ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಅನುಕಂಪದ ಭಾವನೆ ಹೆಚ್ಚುತ್ತಿದೆ. ಕಳೆದ ವಾರ ಕಿಚ್ಚ ಸುದೀಪ್, ಪ್ರತಾಪ್ ಬೆಂಬಲಿಸಿ ಮಾತನಾಡಿದ ಬಳಿಕ ತಪ್ಪು ಮಾಡಿದವರಿಗೆ ತಿದ್ದಿಕೊಳ್ಳುವ ಅವಕಾಶ ನೀಡಬೇಕೆಂದು ಎನ್ನುವ ಪೋಸ್ಟ್‌ಗಳು ಹರಿದಾಡುತ್ತಿವೆ.
ಡ್ರೋನ್ ಪ್ರತಾಪ್ ಪರ ಇನ್‌ಸ್ಟಾಗ್ರಾಮ್‌ನಲ್ಲಿ 20ಕ್ಕೂ ಹೆಚ್ಚು ಫ್ಯಾನ್ ಪೇಜ್‌ಗಳು ಹುಟ್ಟಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.