ADVERTISEMENT

Bigg Boss 8: ನಾಯಕನಾಗಿ ಆಯ್ಕೆಯಾದ ವೈಲ್ಡ್ ಕಾರ್ಡ್ ಸ್ಪರ್ಧಿ ಯಾರು ಗೊತ್ತೇ?

​ಪ್ರಜಾವಾಣಿ ವಾರ್ತೆ
Published 1 ಮೇ 2021, 18:45 IST
Last Updated 1 ಮೇ 2021, 18:45 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 10ನೇ ವಾರಕ್ಕೆ ನಾಯಕನಾಗಿ ವೈಲ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಚಕ್ರವರ್ತಿ ಚಂದ್ರಚೂಡ್ ಆಯ್ಕೆಯಾಗಿದ್ದಾರೆ. ಇಬ್ಬರು ಪ್ರಬಲ ಸ್ಪರ್ಧಿಗಳ ನಡುವಿನ ಸ್ಪರ್ಧೆ ಚಕ್ರವರ್ತಿಗೆ ನಾಯಕನ ಸ್ಥಾನ ತಂದು ಕೊಟ್ಟಿದೆ. ನಾಮಿನೇಶನ್‌ನಲ್ಲಿ ಚಕ್ರವರ್ತಿ ಹೆಸರಿದ್ದು, ನಾಳಿನ ಎಲಿಮಿನೇಶನ್‌ನಲ್ಲಿ ಅವರು ಸೇಫ್ ಆದರೆ ಮಾತ್ರ ಮುಂದಿನ ವಾರ ನಾಯಕನ ದರ್ಬಾರ್ ಮಾಡಬಹುದು.

ಕ್ಯಾಪ್ಟನ್ ಆಯ್ಕೆಗೆ ಕುಣಿದು ಕುಪ್ಪಳಿಸಿದ ಸ್ಪರ್ಧಿಗಳು: ಈ ಬಾರಿ ಕ್ಯಾಪ್ಟನ್ ಆಯ್ಕೆಗೆ ಬಿಗ್ ಬಾಸ್ ವಿಶಿಷ್ಟ ಟಾಸ್ಕ್ ನೀಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದ ಮಂಜು ಪಾವಗಡ, ಅರವಿಂದ್ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬೇರೆ ಬೇರೆ ಸಿನಿಮಾಗಳ ಹಾಡುಗಳನ್ನು ಪ್ಲೇ ಮಾಡಲಾಯಿತು. ಮನೆಯ ಸ್ಪರ್ಧಿಗಳು ಯಾವ ಸ್ಪರ್ಧಿ ಕ್ಯಾಪ್ಟನ್ ಆಗಬೇಕು ಅಂದುಕೊಳ್ಳುತ್ತಾರೋ ಆ ಸ್ಪರ್ಧಿಯ ಹಾಡು ಬಂದಾಗ ರೌಂಡ್ ಸ್ಟೇಜ್ ಮೇಲೆ ಹೋಗಿ ನೃತ್ಯ ಮಾಡಬೇಕಿತ್ತು. ಈ ಟಾಸ್ಕ್‌ನಲ್ಲಿ ಮೂವರೂ ಸ್ಪರ್ಧಿಗಳಿಗೆ ತಲಾ 3 ಮತಗಳು ಬಿದ್ದು, ಕ್ಯಾಪ್ಟನ್ಸಿ ಟಾಸ್ಕ್ ಟೈ ಆಯಿತು. ಬಳಿಕ ಬಿಗ್ ಬಾಸ್ ಮತ್ತೆ ಮೂರು ಬಾರಿ ಹಾಡು ಹಾಕಿ ಕ್ಯಾಪ್ಟನ್ಸಿಗೆ ಕಂಟೆಸ್ಟ್ ಮಾಡಿದ್ದ ಸ್ಪರ್ಧಿಗಳೇ ಪರಸ್ಪರರನ್ನು ಸಪೋರ್ಟ್ ಮಾಡಿ ಡ್ಯಾನ್ಸ್ ಮಾಡುವ ಮೂಲಕ ಕ್ಯಾಪ್ಟನ್ ಆಯ್ಕೆ ಮಾಡುವ ಕೆಲಸ ಕೊಟ್ಟರು.

ಇಲ್ಲಿಯೂ ಸಹ ಟೈ ಆಗಿದ್ದರಿಂದ ಪರಸ್ಪರ ಮಾತುಕತೆ ನಡೆಸಿ ಕ್ಯಾಪ್ಟನ್ ಆಯ್ಕೆಗೆ ಬಿಗ್ ಬಾಸ್ ಸೂಚಿಸಿದರು. ಈ ಸಂದರ್ಭ ನನಗೆ ಕ್ಯಾಪ್ಟನ್ ಆಗಲು ಒಂದು ಅವಕಾಶ ನೀಡುವಂತೆ ಚಕ್ರವರ್ತಿ ಚಂದ್ರಚೂಡ್ ಮನವಿ ಮಾಡಿದರು. ಈ ವೇಳೆ ಅರವಿಂದ್ ಮತ್ತು ಮಂಜು ಮತ್ತೆ ನಾಯಕನಾಗುವ ಆಸೆ ವ್ಯಕ್ತಪಡಿಸಿದರು. ಬಳಿಕ, ನಾವಿಬ್ಬರು ಪರಸ್ಪರ ಕಾಂಪಿಟೇಟರ್ ಎಂಬ ಕಾರಣಕ್ಕೆ ಅರವಿಂದ್ ಮತ್ತು ಮಂಜು ಅವರು ಚಂದ್ರಚೂಡ್ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ಬಿಟ್ಟುಕೊಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.