ADVERTISEMENT

Bigg Boss 8: 9 ಸ್ಪರ್ಧಿಗಳ ಮೇಲೆ ಎಲಿಮಿನೇಶನ್ ತೂಗುಗತ್ತಿ.. ಅಚ್ಚರಿ ಕಾದಿದೆಯಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2021, 14:04 IST
Last Updated 10 ಜುಲೈ 2021, 14:04 IST
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ತೆರೆಬೀಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈ ಮಧ್ಯೆಯೇ, ಎರಡನೇ ಇನಿಂಗ್ಸ್‌ನ ಎರಡನೇ ಎಲಿಮಿನೇಶನ್ ಸಮಯ ಬಂದಾಗಿದ್ದು, ಭಾರೀ ಕುತೂಹಲ ಮನೆ ಮಾಡಿದೆ.

ಎಲಿಮಿನೇಶನ್ ತೂಗುಗತ್ತಿ: ಈ ವಾರ ಮನೆಯ 9 ಸದಸ್ಯರ ಮೇಲೆ ಎಲಿಮಿನೇಶನ್ ತೂಗುಗತ್ತಿ ಇದೆ. ನಾಯಕಿಯಾಗಿ ಇಮ್ಯುನಿಟಿ ಪಡೆದ ದಿವ್ಯಾ ಉರುಡುಗ ಮತ್ತು ನಾಯಕಿಯಿಂದ ಸೇಫ್ ಆದ ಶುಭಾ ಪೂಂಜಾ ಬಿಟ್ಟು ಉಳಿದೆಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ಕೆ.ಪಿ. ಅರವಿಂದ್, ಮಂಜು ಪಾವಗಡ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಪ್ರಿಯಾಂಕ ತಿಮ್ಮೇಶ್, ರಘು, ಶಮಂತ್, ಚಕ್ರವರ್ತಿ ಚಂದ್ರಚೂಡ್, ವೈಷ್ಣವಿ ಈ ಪಟ್ಟಿಯಲ್ಲಿದ್ದು, ವೀಕ್ಷಕರು ಹಾಕಿರುವ ಮತಗಳ ಆಧಾರದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯುವವರು ಯಾರು ಎಂಬುದು ನಿರ್ಧಾರವಾಗಲಿದೆ.

ಈ ವಾರ ಮನೆಯಿಂದ ಹೋಗೋದು ಯಾರು?: ಬಿಗ್ ಬಾಸ್ ಸೀಸನ್ 8 ಅಂತಿಮ ಘಟ್ಟಕ್ಕೆ ಬಂದಿದ್ದು 91 ಎಪಿಸೋಡ್ ಮುಗಿದಿವೆ. ಸಾಮಾನ್ಯವಾಗಿ ಫೈನಲ್ ಹಂತಕ್ಕೆ ಇಬ್ಬರು ಸ್ಪರ್ಧಿಗಳು ಮಾತ್ರವೇ ಇರುವುದರಿಂದ ಈ ವಾರದ ಎಲಿಮೇಶನ್ನಿನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಹೋಗುತ್ತಾರಾ? ಎಂಬ ಕುತೂಹಲ ಮನೆ ಮಾಡಿದೆ. ಕಳೆದ ವಾರ ಎಲ್ಲರ ನಿರೀಕ್ಷೆ ಮೀರಿ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದರು. ಈ ವಾರವೂ ಸರ್‌ಪ್ರೈಸ್ ಕಾದಿದೆಯಾ? ಎಂಬ ಕುತೂಹಲ ಹುಟ್ಟಿಕೊಂಡಿದೆ.

ADVERTISEMENT

ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ. ಈ ವಾರವೂ ಸದಸ್ಯರು ಭಾರೀ ವಿವಾದ ಮಾಡಿಕೊಂಡಿದ್ದು, ಅವರಿಗೆ ಬುದ್ಧಿ ಹೇಳುವುದರಲ್ಲೇ ಶನಿವಾರದ ಎಪಿಸೋಡ್ ಕಳೆದರೂ ಅಚ್ಚರಿ ಇಲ್ಲ.

ಗದ್ದಲದಲ್ಲಿಯೇ ಕಳೆದ ವಾರ: ಈ ವಾರಪೂರ್ತಿ ಬಿಗ್ ಬಾಸ್ ಮನೆಯ ಸದಸ್ಯರು ಗದ್ದಲದಲ್ಲಿಯೇ ಮುಳುಗಿದ್ದರು. ಮನೆಯಲ್ಲಿ ವಿವಾದಗಳಿಂದಲೇ ಸುದ್ದಿಯಾಗುವ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ, ವಾದ ವಿವಾದಗಳ ಮೂಲಕ ಮತ್ತೆ ಮುನ್ನಲೆಗೆ ಬಂದರು. ಅಸಭ್ಯ ಪದ ಬಳಕೆ, ಹೆಣ್ಣುಮಕ್ಕಳ ಜೊತೆ ಜಗಳ ಹೀಗೆ ಹಲವು ವಿವಾದಗಳ ಸಾಲೇ ಇದೆ. ಕೆ.ಪಿ. ಅರವಿಂದ್ ವಿರುದ್ಧ ಪ್ರಶಾಂತ್ ಸಂಬರಗಿ ಸಿಡಿದಿದ್ದು ಈ ವಾರದ ಅತ್ಯಂತ ಹೈಲೆಟ್ ಆದ ಗದ್ದಲವಾಗಿದೆ. ಬಳಿಕ, ಅತ್ತೂ ಕರೆದು ಕಾಂಪ್ರಮೈಸ್ ಆಗಿದ್ದಾರೆ. ನಾಯಕಿ ದಿವ್ಯಾ ಉರುಡುಗ ನಿರ್ಧಾರಗಳ ಬಗ್ಗೆ ಶಮಂತ್, ಚಂದ್ರಚೂಡ್, ಪ್ರಶಾಂತ್ ವಾರಪೂರ್ತಿ ಪ್ರಶ್ನೆ ಎತ್ತಿದ್ದರು. ಮೊದಲ ಮಹಿಳಾ ಕ್ಯಾಪ್ಟನ್ ದಿವ್ಯಾ ಉರುಡುಗ, ಈ ಹಿಂದಿನ ಯಾವುದೇ ಕ್ಯಾಪ್ಟನ್ ಕಾಣದಷ್ಟು ವಿವಾದಗಳನ್ನು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.