ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್‌ನ 7ನೇ ದಿನ ಮನೆಯಲ್ಲಿ ಮತ್ತೆ ವಾದ–ವಿವಾದ ಮತ್ತು ಜಗಳಗಳು ಕಂಡುಬಂದವು. ಬೈಕರ್ ಕೆ.ಪಿ. ಅರವಿಂದ್ ಮತ್ತು ನಟಿ ನಿಧಿ ಸುಬ್ಬಯ್ಯ ನಡುವೆ ಮಾತಿನ ಚಕಮಕಿ ನಡೆದರೆ, ಚಕ್ರವರ್ತಿ ಚಂದ್ರಚೂಡ್ ಅವರು ಮತ್ತೆ ನಟಿ ಪ್ರಿಯಂಕಾ ತಿಮ್ಮೇಶ್ ಅವರನ್ನು ಕೆಣಕಿ ಮಂಗಳಾರತಿ ಮಾಡಿಸಿಕೊಂಡರು.
ಆಗಿದ್ದೇನು..?: ತಾರಾಬಲ ಟಾಸ್ಕ್ ವೇಳೆ, ಅಖಾಡಕ್ಕೆ ಇಳಿದಿದ್ದ ಎರಡೂ ತಂಡಗಳ ತಲಾ ಒಬ್ಬೊಬ್ಬರುಸದಸ್ಯರುಟಿಶೂ ಪೇಪರ್ ರೋಲ್‌ಗಳನ್ನು ಎತ್ತಿಕೊಂಡು ಓಡುತ್ತಿದ್ದಾಗ ಅರವಿಂದ್ ಕೈಯಲ್ಲಿದ್ದ ಕೆಲ ರೋಲ್‌ಗಳು ಕೆಳಗೆ ಬಿದ್ದವು. ಅವುಗಳನ್ನು ನಿಧಿ ಸುಬ್ಬಯ್ಯ ಮತ್ತಿತರರು ಎತ್ತಿಕೊಂಡು ಹೋದರು. ಇದಕ್ಕೆ ತಗಾದೆ ತೆಗೆದ ಅರವಿಂದ್, ರನ್ನರ್ ಮಾತ್ರ ಬಿದ್ದ ರೋಲ್‌ಗಳನ್ನು ಎತ್ತಿಕೊಳ್ಳಬೇಕು.‘ಅವರ ವರ್ತನೆ ಅವರ ಕ್ಯಾರೆಕ್ಟರ್ ತೋರಿಸುತ್ತೆ’ ಎಂದು ಕುಟುಕಿದರು. ಇದರಿಂದ ಕೋಪಗೊಂಡ ನಿಧಿ ಸುಬ್ಬಯ್ಯ ಅವನಿಗೆ ‘ಕ್ರೀಡಾ ಸ್ಫೂರ್ತಿ’ಇಲ್ಲವೆಂದು ನಾಯಕ ಮಂಜು ಜೊತೆ ಅಸಮಾಧಾನ ಹೊರಹಾಕಿದರು.
ಮುಚ್ಕೊಳಿ ಎಂದ ಅರವಿಂದ್ ವಿರುದ್ಧ ಕೆರಳಿದ ನಿಧಿ: ಹೌದು, ಟಾಸ್ಕ್ ರನ್ನಿಂಗ್ ಇರುವಾಗ ವೃತ್ತದಿಂದ ಹೊರಬಂದ ನಿಧಿ ಮತ್ತಿತರರು ಟಿಶು ರೋಲ್ ಎತ್ತಿಕೊಂಡು ಹೋದ ಬಗ್ಗೆ ‘ಸೂರ್ಯ ಸೇನಾ’ ತಂಡದ ನಾಯಕ ಅರವಿಂದ್ ‘ಕ್ವಾಟ್ಲೆ ಕಿಲಾಡಿಗಳು’ ತಂಡದ ನಾಯಕ ಮಂಜು ಪಾವಗಡ ಬಳಿ ಬಂದು ಮಾತನಾಡುತ್ತಿದ್ದರು. ಈ ಸಂದರ್ಭ ಮಧ್ಯಪ್ರವೇಶಿಸಿದ ನಿಧಿಗೆ ‘ಮುಚ್ಕೊಳಿ’ನಾನು ನಾಯಕನ ಜೊತೆ ಮಾತನಾಡುತ್ತಿದ್ದೇನೆ ಎಂದರು. ಇದರಿಂದ ಕೋಪಗೊಂಡ ನಿಧಿ, ನಿನಗೆ ಕ್ರೀಡಾಮನೋಭಾವ ಇಲ್ಲ. ನೀನು ಎಂತಹ ಕ್ರೀಡಾಳು. ನೀನು ಕಲಿತಿದ್ದು ಇದೇನಾ? ಸೋಲೊಪ್ಪಿಕೊಳ್ಳಲು ನಿನಗೆ ಆಗುತ್ತಿಲ್ಲ ಎಂದು ಹಿಗ್ಗಾಮುಗ್ಗಾ ಹರಿಹಾಯ್ದರು.
‘ನೀನು ಮುಚ್ಕೊಂಡು ಹೋಗು. ಲೂಸರ್’ ಎಂದು ಕಿಡಿಕಾರಿದರು. ‘ಕ್ರೀಡಾಳು ಎಂದು ನೀನು ಇಲ್ಲಿಗೆ ಬಂದಿರುವುದು. ಕ್ರೀಡಾ ಮನೋಭಾವವೇ ನಿನಗಿಲ್ಲ’ ಎಂದು ಹರಿಹಾಯ್ದರು.
ತಪ್ಪಿಲ್ಲದಿದ್ದರೂ ಆಕ್ಷೇಪಿಸಿದ ಅರವಿಂದ್: ಟಾಸ್ಕ್ ಮುಗಿದ ಬಳಿಕ ಕ್ವಾಟ್ಲೆ ಕಿಲಾಡಿಗಳು ತಂಡ ಗೆದ್ದಿದೆ ಎಂದು ಬಿಗ್ ಬಾಸ್ ಘೊಷಿಸಿದರು. ಅಲ್ಲಿಗೆ, ನಿಧಿ ಮತ್ತಿತರರು ತಪ್ಪು ಮಾಡಿಲ್ಲವೆಂದು ಸಾಬೀತಾಯಿತು. ಈ ವಿಷಯವನ್ನು ಮೊದಲೇ ದಿವ್ಯಾ ಉರುಡುಗ ಅವರು ಅರವಿಂದ್‌ಗೆ ತಿಳಿಸಿದ್ದರು. ಬಿದ್ದಿ ರೋಲ್‌ಗಳನ್ನು ಎತ್ತಿಕೊಳ್ಳಬಾರದೆಂದು ಎಲ್ಲಿಯೂ ಬರೆದಿಲ್ಲ ಎಂದು ಹೇಳಿದ್ದರು. ಆದರೂ, ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಮಾತು ಕೇಳಿಕೊಂಡು ಅರವಿಂದ್ ಜಗಳ ತೆಗೆದಿದ್ದರು.
ಪ್ರಿಯಾಂಕಾಳನ್ನು ಕೆಣಕಿದ ಚಂದ್ರಚೂಡ್: ಟಾಸ್ಕ್ ಮುಗಿದ ಬಳಿಕ ಕಂಗ್ರಾಟ್ಸ್ ಹೇಳುವಂತೆ ಬಂದ ಚಕ್ರವರ್ತಿ, ಕೈ ನೀಡಿ ಪ್ರಿಯಂಕಾ ಅವರಿಗೆ ವಿಶ್ ಮಾಡಿದರು. ಇದಕ್ಕೆ ಉತ್ತರ ಬರದಿದ್ದಾಗ ನಿನಗೆ ವಿಶ್ ಮಾಡಲು ಬಂದ ನನಗೆ ಬುದ್ಧಿ ಇಲ್ಲ ಎಂದು ಗೊಣಗಿದರು. ಇದರಿಂದ, ಕೆರಳಿದ ಪ್ರಿಯಾಂಕ ತಿಮ್ಮೇಶ್, ನೀವೇ ನನ್ನ ಬಳಿ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದರು. ಹೀಗೆ ಮಾತಿಗೆ ಮಾತು ಬೆಳೆದು ಶಮಂತ್ ಪ್ರಿಯಾಂಕಾಳನ್ನು ಸುಮ್ಮನಿರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.