‘ರಾಜಾರಾಣಿ’ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನಗೆದ್ದ ನಟಿ ಚಂದನಾ, ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.84 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಅವರು ಕೊನೆ ಹಂತದಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದರೂ ವೀಕ್ಷಕರ ಮನಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ ತುಮಕೂರಿನ ಈ ಚೆಲುವೆ.
ಈ ರಿಯಾಲಿಟಿ ಶೋನ ಮತ್ತೊಬ್ಬ ಸ್ಪರ್ಧಿ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ಚಂದನಾ ನಡುವೆ ಕುದುರಿದ ಗಾಢಸ್ನೇಹದ ಬಗ್ಗೆ ಬಿಗ್‌ಬಾಸ್ ಮನೆಯ ಒಳಗೆ ಮತ್ತು ಹೊರಗೂ ಒಂದಿಷ್ಟು ಚರ್ಚಿತವಾಗುತ್ತಲೂ ಇದೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಚಂದನಾ ಏನು ಮಾಡುತ್ತಿದ್ದಾರೆ ಮತ್ತು ಮನೆಯೊಳಗಿರುವ ಸ್ಪರ್ಧಿಗಳು ಹಾಗೂ ಆಪ್ತ ಸ್ನೇಹಿತ ವಾಸುಕಿ ವೈಭವ್ ಕುರಿತುತಮ್ಮ ಅನಿಸಿಕೆಗಳನ್ನು ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.
* ಬಿಗ್‌ಬಾಸ್ ಮನೆಯೊಳಗಿನಜೀವನ ಹೇಗಿತ್ತು?
ಬಿಗ್‌ಬಾಸ್ ಮನೆಯಲ್ಲಿ ಕಳೆದ ದಿನಗಳು ತುಂಬಾ ಮದುರವಾಗಿವೆ. ಸ್ವಲ್ಪ ದಿನ ಅಳು, ನಗು, ಮಜಾ, ಕಷ್ಟ ಎಲ್ಲವೂ ಇತ್ತು. ಜನರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೊ ಎನ್ನುವ ಗೊಂದಲ ಇತ್ತು. ಆದರೆ, ಜನರಿಂದ ನನಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
* ಏನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರಿ?
ನನಗೆ ಅಲ್ಲಿ ಸಿಕ್ಕ ಫ್ರೆಂಡ್ಸ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಭೂಮಿ, ವಾಸುಕಿ ಮತ್ತು ಶೈನ್ ಅವರನ್ನುತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. (ವಾಸುಕಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕೆಣಕಿದರೆ ನಗುತ್ತಲೇ ಹೌದು ಎಂದರು). ನಮ್ಮಿಬ್ಬರ ನಡುವೆ ಸ್ನೇಹದ ಬಂಧ ಶುರುವಾಗಿದ್ದು ಒಂದು ಹಾಡು ಹಾಡುವ ಸನ್ನಿವೇಶದಿಂದ. ಹಾಗೆಯೇ ಏನೇ ಬೇಜಾದರೂ ಅವರ ಜತೆ ಕುಳಿತು ಮಾತನಾಡುವಷ್ಟು ಸ್ನೇಹ ಬೆಳೆಯಿತು. ಅವರ ಮಾತು ಕೇಳುವಾಗ ನಮ್ಮಿಬ್ಬರ ಕುಟುಂಬಗಳು ಮತ್ತು ಆಲೋಚನೆಗಳು ಒಂದೇ ರೀತಿ ಇವೆ ಎನಿಸಿತು. ಎಷ್ಟೋ ಬಾರಿ ನನಗೆ ಅವರು ಮಾರ್ಗದರ್ಶನ ಮಾಡುತ್ತಿದ್ದರು.
* ಬಿಗ್‌ಬಾಸ್‌ನಲ್ಲಿ ಆದ ಸ್ನೇಹ– ಪ್ರೀತಿ ದಾಂಪತ್ಯದತ್ತ ಹೊರಳಿದ (ನಿವೇದಿತಾ ಗೌಡ– ಚಂದನ್ ಶೆಟ್ಟಿ ಹಸೆ ಮಣೆ ಏರುತ್ತಿದ್ದಾರೆ)ನಿದರ್ಶನ ಇದೆಯಲ್ಲ ?
ಆ ಥರ ಏನಿಲ್ಲ ... (ನಗು). ಆಥರದ್ದು ಏನೂ ಇಲ್ಲ ನಿಜವಾಗಲೂ... (ಮತ್ತೆ ನಗು). ನಮ್ಮದು ಒಂದು ಆರೋಗ್ಯಕರ ಸಂಬಂಧ.ಸ್ನೇಹ ಬಿಟ್ಟರೆ ಬೇರೆ ಏನೂ ಇಲ್ಲ.
* ಬಿಗ್ ಬಾಸ್ ಮನೆಯಿಂದ ನಿಮಗೆ ವಿಶೇಷವಾಗಿ ಏನು ಸಿಕ್ಕಿತು?
ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಸ್ವತಂತ್ರವಾಗಿ ಇರುವುದು, ಒಳ್ಳೆಯ ಫ್ರೆಂಡ್ಸ್‌ಶಿಪ್ ... ಹೀಗೆ ತುಂಬಾನೆ ಸಿಕ್ಕಿದೆ. ಜೀವನದಲ್ಲಿ ಮರೆಯಲು ಆಗದಂತಹ ಒಳ್ಳೆಯ ಅನುಭವ ಸಿಕ್ಕಿದೆ.
* ಮೊಬೈಲ್ ಬಿಟ್ಟಿರಲು ಕಷ್ಟವಾಯಿತಾ?
ನಿಜ ಹೇಳಬೇಕೆಂದರೆ ನನಗೆ ಒಂದು ದಿನವೂ ಕಷ್ಟವಾಗಲಿಲ್ಲ, ಮನೆಯೊಳಗೆ ಹೋದ ಮೇಲೆ ಒಂದು ಕ್ಷಣಕ್ಕೂ ಮೊಬೈಲ್ ನೆನಪಾಗಲಿಲ್ಲ. ಈಗ ಹೊರಗೆ ಬಂದ ಮೇಲೆ ಮೊಬೈಲ್ ಬಿಟ್ಟಿರಲು ಆಗುತ್ತಿಲ್ಲ.
* ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದು ನಿರಾಸೆಯಾಗಲಿಲ್ಲವೇ?
ತುಂಬಾ ಬೇಜಾರಾಯಿತು. ಇನ್ನು ಸ್ವಲ್ಪ ದಿನ ಇರಬಹುದಿತ್ತು ಅನಿಸಿತು. ಸ್ವಲ್ಪದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಟ್ರಾಂಗ್ ಇರಬೇಕಾಗಿತ್ತು. ಫಿಸಿಕಲ್ ಟಾಸ್ಕ್‌ಗಳಲ್ಲಿ ಇನ್ನು ಸ್ವಲ್ಪ ಸ್ಟ್ರಾಂಗ್ ಆಗಿರಬೇಕಿತ್ತು. ನನಗೆ ಅನಿಸಿದ್ದನ್ನು ಗಟ್ಟಿ ಧ್ವನಿಯಲ್ಲಿ ಹೇಳಬೇಕಿತ್ತು. ಭಾವನಾತ್ಮಕವಾಗಿ ಸ್ವಲ್ಪ ದುರ್ಬಲವಾಗಿದ್ದೂ ನನ್ನ ತಪ್ಪು ಎನಿಸಿದೆ.
* ನಿಮ್ಮ ದೃಷ್ಟಿಯಲ್ಲಿಯಾರು ಗೆಲ್ಲುವ ಸ್ಪರ್ಧಿಗಳು ಮತ್ತು ಯಾರು ಗೆಲ್ಲಬೇಕು?
ಈ ಸೀಸನ್‌ನಲ್ಲಿ ಶೈನ್ ಗೆಲ್ಲುತ್ತಾರೆ ಎನಿಸುತ್ತದೆ. ಟಾಸ್ಕ್, ಎಂಟರ್‌ಟೈನ್‌ಮೆಂಟ್ ಎಲ್ಲದರಲ್ಲೂ ಶೈನ್ ಚೆನ್ನಾಗಿ ಆಡುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ವಾಸುಕಿ ಮತ್ತು ಶೈನ್ ಈ ಇಬ್ಬರಲ್ಲಿ ಯಾರಾದರೊಬ್ಬರು ಗೆಲ್ಲಬೇಕು.ಆದರೆ, ಗೆಲ್ಲುವುದು ಯಾರೆಂದು ಜಾಸ್ತಿ ಎನಿಸುವುದು ಶೈನ್. ನನಗೆಶೈನ್ ಫೇವರಿಟ್.
* ನಿಮ್ಮ ವೃತ್ತಿ ಬದುಕಿನಲ್ಲಿ ಈಗ ಅವಕಾಶಗಳು ಹೆಚ್ಚುತ್ತಿವೆಯೇ?
ಹೌದು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶಗಳು ಬಂದಿವೆ. ಆದರೆ, ನಾನಿನ್ನು ಯಾವುದನ್ನು ಓಕೆ ಮಾಡಿಲ್ಲ. ಬಿಗ್‌ಬಾಸ್ ಮನೆಯಿಂದ ಹೊರಬಂದು ಒಂದು ವಾರವಷ್ಟೇ ಆಗಿದೆ. ಇನ್ನೂ ನಾನು ಆ ಹ್ಯಾಂಗೋವರ್‌ನಲ್ಲೇ ಇದ್ದೇನೆ. ಅದರಿಂದ ಹೊರ ಬಂದು ಅವಕಾಶಗಳತ್ತ ಗಮನ ಕೊಡುತ್ತೇನೆ. ಕಥೆ– ನಿರ್ದೇಶಕರು ಮತ್ತು ಪಾತ್ರ ನನಗೆ ಇಷ್ಟವಾದರೆ ಮಾತ್ರ ಅಭಿನಯಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.