ಕೊಳ್ಳೇಗಾಲ: ‘ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ರಿಯಾಲಿಟಿ ಶೋನಲ್ಲಿ ಮೆಕಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗಕ್ಕೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ಕೊಳ್ಳೇಗಾಲ ಟೌನ್ ದ್ವಿಚಕ್ರ ವಾಹನ ದುರಸ್ಥಿಗಾರರ ಸಂಘದ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಬುಧವಾರ ದೂರು ನೀಡಿದ್ದಾರೆ.
‘ಮೆಕಾನಿಕ್ ಕೆಲಸ ಮಾಡುವವರು ಕೊಚ್ಚೆ, ಅವರ ಮನೆಯವರು ಗ್ರೀಸ್ ತಿಂದು ಬದುಕುತ್ತಿದ್ದಾರೆ ಎಂದು ಬಿಂಬಿಸಲಾಗಿದೆ. ಒಂದು ಶ್ರಮಿಕ ವರ್ಗವನ್ನು ನಿಂದಿಸಿರುವ ಈ ಕಾರ್ಯಕ್ರಮ ನಡೆಸಿಕೊಡುವ ಮುಖ್ಯಸ್ಥರು, ತೀರ್ಪುಗಾರರಾದ ರಮೇಶ್ ಅರವಿಂದ್, ಪ್ರೇಮಾ, ನಿರೂಪಕಿ ಅನುಶ್ರೀ ಹಾಗೂ ಸ್ಪರ್ಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.