ವಾಷಿಂಗ್ಟನ್: ಜನಪ್ರಿಯ ಒಟಿಟಿ ವೇದಿಕೆಯಾದ ಡಿಸ್ನಿ+ಹಾಟ್‌ಸ್ಟಾರ್ ತನ್ನ ಚಂದಾದಾರರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ.
ತನ್ನ ಸ್ಟ್ರೀಮಿಂಗ್ ಆ್ಯಪ್‌ನಲ್ಲಿ ಪ್ರಸಾರವಾಗುತ್ತಿದ್ದ ಎಚ್‌ಬಿಒ ಸರಣಿಗಳನ್ನು ನಿಲ್ಲಿಸಲಾಗುವುದು ಎಂದು ಡಿಸ್ನಿ+ಹಾಟ್‌ಸ್ಟಾರ್ ಟ್ವೀಟ್ ಮೂಲಕ ತಿಳಿಸಿದೆ.
ಡಿಸ್ನಿ ಸಿಇಒ ಬಾಬ್ ಐಗರ್, ‘ಡಿಸ್ನಿಯಲ್ಲಿ ವೆಚ್ಚ ನಿಯಂತ್ರಣಕ್ಕಾಗಿ ಉದ್ಯೋಗ ಕಡಿತ ಮಾಡುವುದು ಅನಿವಾರ್ಯ’ ಎಂದು ಇತ್ತೀಚೆಗೆನಿರ್ಧಾರ ಪ್ರಕಟಿಸಿರುವ ಬೆನ್ನಲ್ಲೇ ಹಾಟ್‌ಸ್ಟಾರ್ ಈ ಕ್ರಮ ಕೈಗೊಂಡಿದೆ.
ಮುಂದಿನ ತಿಂಗಳು ಏಪ್ರಿಲ್ 31 ರಿಂದ ಎಚ್‌ಬಿಒ ಕಂಟೆಂಟ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವುದಿಲ್ಲ. ಎಚ್‌ಬಿಒ ಜೊತೆಗಿನ ಒಪ್ಪಂದ ರದ್ದಾಗಿದೆ ಎಂದು ತಿಳಿಸಿದೆ.
ಗೇಮ್ ಆಫ್ ಥ್ರೋನ್, ಹೌಸ್ ಆಫ್ ಡ್ರ್ಯಾಗನ್ ಅಂತಹ ಎಚ್‌ಬಿಒದ ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗಳು ಇನ್ಮುಂದೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ನೋಡಲು ಸಿಗುವುದಿಲ್ಲ. ಎಚ್‌ಬಿಒ ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಮುಖ ಎಂಟರಟೈನ್‌ಮೆಂಟ್ ಸಂಸ್ಥೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.