ನವದೆಹಲಿ: ಏಪ್ರಿಲ್ 3 ರಂದು ಕೊನೆಗೊಂಡವಾರಂತ್ಯದಲ್ಲಿ ದೂರದರ್ಶನವು ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಮಾಧ್ಯಮವಾಗಿ ಹೊರಹೊಮ್ಮಿದೆಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹೇಳಿದೆ.
ಮಾರಣಾಂತಿಕ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಮೂರು ವಾರಗಳ ಕಾಲ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಪೌರಾಣಿಕ ಧಾರಾವಾಹಿಗಳಾದ ರಾಮಾಯಣ, ಮಹಾಭಾರತ, ಶಕ್ತಿಮಾನ್ ಮತ್ತು ಬುನಿಯಾದ್ ಸರಣಿಗಳು ದೂರದರ್ಶನದಲ್ಲಿ ಮರುಪ್ರಸಾರಗೊಂಡಿವೆ.
90ರ ದಶಕದಲ್ಲಿ ಪ್ರಸಾರಗೊಂಡಿದ್ದ ಈ ಧಾರಾವಾಹಿಗಳು ದೇಶದ ಮಧ್ಯಮವರ್ಗದಜನರನ್ನು ಮತ್ತೆ ಆಕರ್ಷಿಸಲು ಯಶಸ್ವಿಯಾಗಿವೆ. ಆ ಕಾರಣ ಕೊನೆಯ ವಾರಾಂತ್ಯದಲ್ಲಿ ದೂರದರ್ಶನ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆಎಂದು ಬಾರ್ಕ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.