ಜೀ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮಗಳ ಪೈಕಿ ಒಂದಾದ ‘ಡ್ರಾಮಾ ಜ್ಯೂನಿಯರ್ಸ್’ನ 3ನೇ ಆವೃತ್ತಿ ಮತ್ತೆ ಬರುತ್ತಿದೆ.
ರಿಯಾಲಿಟಿ ಶೋ ಚಿತ್ರೀಕರಣ ಮತ್ತು ಪ್ರಸಾರ ಎರಡೂ ಜನರಿಂದ ದೂರವಾಗಿ ನಡೆಯುವಂತಹ ಪ್ರಕ್ರಿಯೆ. ಇಲ್ಲಿ ಪ್ರೇಕ್ಷಕರಿಗೂ, ನಟರಿಗೂ ನೇರ ಮುಖಾಮುಖಿ ಇರುವುದಿಲ್ಲ. ಆದರೆ ರಂಗಭೂಮಿ ಜನರ ನೇರಸಂಪರ್ಕಕ್ಕೆ ಮತ್ತು ಸಂವಹನಕ್ಕೆ ಒಳಪಡುವಂತದ್ದು. ಇದೇ ಮಾನದಂಡ ಇಟ್ಟುಕೊಂಡು ಎರಡು ವರ್ಷಗಳ ಹಿಂದೆ ಬಂದ ‘ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ’, ಮುಗ್ದ ಮನಸ್ಸಿನ ಮಕ್ಕಳ ನಟನಾ ಕೌಶಲ್ಯಕ್ಕೆ ಮತ್ತು ಅವರ ಅಭಿನಯ ಸಾಮರ್ಥ್ಯಕ್ಕೆ ಅದರ ಮೂಲಕ ವೇದಿಕೆ ಕಲ್ಪಿಸಲಾಗಿತ್ತು.
‘ಈ ಕಾರ್ಯಕ್ರಮ ಮನರಂಜನೆಯನ್ನಷ್ಟೇ ಅಲ್ಲದೇ, ವಿನೂತನ, ವಿಭಿನ್ನ ಪ್ರಯೋಗಗಳ ಮೂಲಕ ಹೊಸತನವನ್ನು ವೀಕ್ಷಕರಿಗೆ ಪರಿಚಯಿಸುತ್ತಿದೆ. ಅಭಿನಯದ ಜೊತೆಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿದೆ’ ಎಂದು ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.
‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ಮತ್ತು ಸೀಸನ್ 2 ಯಶಸ್ವಿಗೊಂಡಿದ್ದವು.ಅದರ ಮುಂದುವರಿದ ಅಧ್ಯಾಯವೇ ‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 3’. ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗುತ್ತಿದೆ. ಈ ಸೀಸನ್‌ಗೆ ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಅಭಿನಯ ಕೌಶಲವುಳ್ಳ 30 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಸದ್ಯಆ 30 ಮಕ್ಕಳು ಮೆಗಾ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಾಗುತ್ತಿದ್ದಾರೆ.
ಹಿರಿಯ ನಟಿಲಕ್ಷ್ಮಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಾಗು ನಟ ವಿಜಯರಾಘವೇಂದ್ರ ಅವರು ಎಂದಿನಂತೆ ತೀರ್ಪುಗಾರರ ಖುರ್ಚಿ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ, ಮಕ್ಕಳಿಂದ ಹಿಡಿದು ವಯೋಮಾನದವರನ್ನು ನಕ್ಕುನಗಿಸಲೆಂದೇಮಾಸ್ಟರ್ ಆನಂದ್ ಈ ಬಾರಿಯೇ ಕಾರ್ಯಕ್ರಮದ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದಿದೆ ವಾಹಿನಿಯು.
ಅಂದಹಾಗೇಇದೇ ಅಕ್ಟೋಬರ್ 20 ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ, ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಸೀಸನ್ 3 ಪ್ರಸಾರಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.