ಬೆಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ‘ಕಾಮಿಡಿನೈಟ್ಸ್‌ವಿತ್ ಕಪಿಲ್ ಶೋ‘ ಮೇಲೆ ಎಫ್‌ಐಆರ್ ದಾಖಲಾಗಿದೆ.
ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುವ ದೃಶ್ಯಗಳನ್ನು ಶೋ ನಲ್ಲಿ ಪ್ರಸಾರ ಮಾಡಲಾಗಿದೆ ಹಾಗೂ ನ್ಯಾಯಾಲಯಕ್ಕೆ ಅವಮಾನ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇತ್ತೀಚೆಗೆ ಶೋನಲ್ಲಿ ಬಿತ್ತರವಾದ ದೃಶ್ಯದಲ್ಲಿ ಕೋರ್ಟ್ ಸೆಟ್ ಹಾಕಲಾಗಿತ್ತು. ಅದರಲ್ಲಿ ನಟ–ನಟಿಯರ ಕೈಯಿಂದ ಮದ್ಯ ಸೇವಿಸುವ ದೃಶ್ಯವನ್ನು ಅಳವಡಿಸಿ ಬಿತ್ತರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲದೇ ಶೋನಲ್ಲಿ ನ್ಯಾಯಾಲಯದ ಗೌರವಕ್ಕೆ ದಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.
ನಟ ಕಪಿಲ್ ಶರ್ಮಾ ಅವರು ನಡೆಸಿ ಕೊಡುವ ಈ ಶೋನಲ್ಲಿ ಸುಮನ್ ಚಕ್ರವರ್ತಿ, ಭಾರತಿ ಸಿಂಗ್, ಸುಂದೇಶ್ ಲೆಹರಿ, ಅರ್ಚನಾ ಸಿಂಗ್ ಸಹ ಶೋವನ್ನು ನಡೆಸಿ ಕೊಡುತ್ತಾರೆ. ಅಪಾರ ವೀಕ್ಷಕರನ್ನು ಹೊಂದಿರುವ ಈ ಕಾರ್ಯಕ್ರಮ ಅನೇಕ ಸಲ ವಿವಾದಗಳಿಗೂ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.