ADVERTISEMENT

ಕಿರುತೆರೆ: ಮಾರ್ಚ್‌ 3ರಂದು ಕೊಪ್ಪಳದ ಯಲಬುರ್ಗಾದಲ್ಲಿ ‘ಹಿಟ್ಲರ್ ಕಲ್ಯಾಣ ಜಾತ್ರೆ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 10:23 IST
Last Updated 2 ಮಾರ್ಚ್ 2022, 10:23 IST
‘ಜಾತ್ರೆ’ಯ ಪೋಸ್ಟರ್‌
‘ಜಾತ್ರೆ’ಯ ಪೋಸ್ಟರ್‌   

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್‌ ಕಲ್ಯಾಣ’. ಕಳೆದ ಆಗಸ್ಟ್‌ 9ರಂದು ಪ್ರಸಾರ ಆರಂಭಿಸಿತ್ತು. ಮಾರ್ಚ್‌ 3ರಂದು ಸಂಜೆ 5.30ಕ್ಕೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ತಾಲ್ಲೂಕು ಕ್ರೀಡಾಂಗಣದಲ್ಲಿ ‘ಹಿಟ್ಲರ್ ಕಲ್ಯಾಣ ಜಾತ್ರೆ’ ನಡೆಸಲಿದೆ.

ವೀಕ್ಷಕರ ಜೊತೆ ಮುಖಾಮುಖಿಯಾಗಲಿರುವ ಈ ಕಾರ್ಯಕ್ರಮದಲ್ಲಿಎ ಜೆ, ಲೀಲಾ, ದುರ್ಗ, ಲಕ್ಷ್ಮೀ, ಸರಸ್ವತಿ, ಅಂತರ, ವಿಶ್ವರೂಪ ಮುಂತಾದ ಪಾತ್ರಗಳ ಕಲಾವಿದರ ಜೊತೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ.ಪಾರು ಧಾರಾವಾಹಿಯ ಆದಿತ್ಯ ಮತ್ತು ಪಾರು ಪಾತ್ರಧಾರಿಗಳೂ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್‌ 6ರಂದು ಸಂಜೆ 7.30ಕ್ಕೆ ಈ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ಜೀ ವಾಹಿನಿ ಪ್ರಕಟಣೆ ತಿಳಿಸಿದೆ.

ಸೊಸೆಯಂದಿರು ಸೇರಿ ಫರ್ಫೆಕ್ಟ್ ಮಾವನಿಗೆ ಅತ್ತೆಯನ್ನು ಹುಡುಕುವ ಕತೆಯ ಈ ‘ಹಿಟ್ಲರ್ ಕಲ್ಯಾಣ’. ಇದೀಗ ಎಡವಟ್ಟು ಅತ್ತೆಯೊಬ್ಬರು 3 ಜನ ಸೊಸೆಯಂದಿರನ್ನು ತರಾಟೆಗೆ ತೆಗೆದುಕೊಳ್ಳುವ ಸನ್ನಿವೇಶಗಳು ವೀಕ್ಷಕರ ಗಮನ ಸೆಳೆದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.