ಸಿನಿಮಾ, ಸರಣಿ ಸೀರಿಯಲ್‌ಗಳು, ಪ್ರತ್ಯೇಕ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿಯೂ ಯುವ ಮನಸುಗಳನ್ನು ಸೆಳೆಯುತ್ತಿರುವ ಅಂತರ್ಜಾಲ ಆಧಾರಿತ 'ನೆಟ್‌ಫ್ಲಿಕ್ಸ್' ಸೇವೆಯ ಲಾಭ ಪಡೆಯುವ ಅವಕಾಶದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಕೇಬಲ್ ಅಥವಾ ಡಿಶ್ ಸಂಪರ್ಕಕ್ಕಿಂತ ವಿಭಿನ್ನವಾದ, ‘ಓವರ್-ದಿ-ಟಾಪ್’ ಅಥವಾ ಒಟಿಟಿ ಎಂದು ಕರೆಯುವ ವ್ಯವಸ್ಥೆಗೆ ನೆಟ್‌ಫ್ಲಿಕ್ಸ್ ಸಹ ಒಂದು ಉದಾಹರಣೆ. ಅಂತರ್ಜಾಲವನ್ನು ಬಳಸಿಕೊಂಡು ಎಲ್ಲ ಕಾರ್ಯಕ್ರಮಗಳು ಅಥವಾ ವಿಡಿಯೊಗಳನ್ನು ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು. ಈ ರೀತಿ ಕಾರ್ಯಕ್ರಮ ವೀಕ್ಷಿಸಲು ಯಾವುದೇ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕಗಳಿಂದ ಅಂತರ್ಜಾಲ ಸೇವೆ ಪಡೆಯುತ್ತಿದ್ದೇವೆ. ಬಳಸುವ ಡಾಟಾಗೂ ದುಡ್ಡು, ನೆಟ್‌ಫ್ಲಿಕ್ಸ್ ವೇದಿಕೆಗೂ ದುಡ್ಡು ನೀಡಬೇಕಾಗಿರುವ ಸಮಯದಲ್ಲಿ ನೆಟ್‌ಫ್ಲಿಕ್ಸ್‌ನಿಂದ ಹೆಚ್ಚಿನದನ್ನು ಪಡೆದುಕೊಳ್ಳುವ ಅವಕಾಶವೂ ಇದೆ.
ನೆಟ್‌ಫ್ಲಿಕ್ಸ್ ನಿರ್ಮಿಸಿದ ಹಿಂದಿ ಭಾಷೆಯ ಮೊದಲ ಥ್ರಿಲ್ಲರ್ ಸರಣಿ 'ಸೇಕ್ರೆಡ್ ಗೇಮ್ಸ್' ವೀಕ್ಷಿಸಿಯೂ ಇಷ್ಟಪಡದೆಯೇ ಉಳಿದವರಿಲ್ಲ. ದಿ ಕ್ರೌನ್, ಚಾಪ್‌ಸ್ಟಿಕ್ಸ್, ಲಸ್ಟ್ ಸ್ಟೋರೀಸ್‌ನಂತಹ ಸಿನಿಮಾ ಹಾಗೂ ಸೀರಿಯಲ್‌ಗಳನ್ನು ವೀಕ್ಷಿಸುವುದು ಅಭ್ಯಾಸವಾಗಿ ಹೋಗಿರುವವರಿಗೆ ಡಾಟಾ ಅಥವಾ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪಕ್ಷನ್ ಸಮಸ್ಯೆ ಎದುರಾಗದೆಯೇ ಇರದು. ಇವುಗಳಿಗೆ ನೆಟ್‌ಫ್ಲಿಕ್ಸ್ ಒಪ್ಪಂದಗಳ ಮೂಲಕ ಪರಿಹಾರ ನೀಡಲು ಪ್ರಯತ್ನಿಸಿದೆ.
ಏರ್‌ಟೆಲ್ ಬಳಕೆದಾರರಿಗೆ ಗಿಫ್ಟ್ ಪ್ಯಾಕ್!
ಏರ್‌ಟೆಲ್ ನೆಟ್‌ವರ್ಕ್ ಬಳಸುತ್ತಿರುವವರಿಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಉಡುಗೊರೆಯಾಗಿ ಸಿಗುತ್ತಿದೆ. ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕ ಹೊಂದಿದ್ದು, ಮಾಸಿಕ ₹499 ಅಥವಾ ಹೆಚ್ಚಿನ ಮೊತ್ತದ ಪ್ಲಾನ್ ಆಯ್ಕೆ ಮಾಡಿಕೊಂಡಿರುವವರಿಗೆ; ಇಲ್ಲವೇ ಹೊಸ ಸಂಪರ್ಕ ಪಡೆಯುವವರಿಗೂ ನೆಟ್‌ಫ್ಲಿಕ್ಸ್ 3 ತಿಂಗಳ ಚಂದಾದಾರಿಕೆ ಅನ್ವಯವಾಗುತ್ತಿದೆ. 3 ತಿಂಗಳ ನಂತರ ಮೊಬೈಲ್ ಬಿಲ್‌ನೊಂದಿಗೆ ನೆಟ್‌ಫ್ಲಿಕ್ಸ್ ಸೇವೆಯ ಶುಲ್ಕವೂ ಸೇರ್ಪಡೆಯಾಗುತ್ತದೆ.
ಇದನ್ನೂ ಓದಿ:ಟಿ.ವಿ.ಯಿಂದ ನೆಟ್‌ಫ್ಲಿಕ್ಸ್ ಕಡೆಗೆ...
ಈವರೆಗೂ ನೆಟ್‌ಫ್ಲಿಕ್ಸ್ ಗಿಫ್ಟ್ ಪಡೆಯದಿರುವವರು ಏರ್‌ಟೆಲ್ ಆ್ಯಪ್‌ಗೆ ಸೈನ್–ಇನ್ ಆಗಿ ಚಂದಾದಾರಿಕೆ ಪಡೆಯಬಹುದಾಗಿದೆ. ಏರ್‌ಟೆಲ್ ಇತ್ತೀಚೆಗೆ ಬಿಡುಗಡೆ ಮಾಡಿರುವ 'ಏರ್‌ಟೆಲ್ ಎಕ್ಸ್‌ಸ್ಟ್ರೀಮ್' ಸೆಟ್ ಟಾಪ್ ಬಾಕ್ಸ್ ಮೂಲಕವೂ ನೆಟ್‌ಫ್ಲಿಕ್ಸ್ ವೀಕ್ಷಣೆ ಸಾಧ್ಯವಿದೆ.
ವೊಡಾಫೋನ್:
ಅನ್‌ಲಿಮಿಟೆಡ್ ಡಾಟಾ ಸೇವೆ ನೀಡುತ್ತಿರುವ 'ವೊಡಾಫೋನ್ ರೆಡ್ ಪೋಸ್ಟ್‌ಪೇಯ್ಡ್' ಪ್ಲಾನ್ ಆಯ್ಕೆ ಮಾಡಿಕೊಂಡರೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಅಥವಾ ಯಾವುದೇ ಪೋಸ್ಟ್‌ಪೇಯ್ಡ್ ಪ್ಲಾನ್ ಹೊಂದಿರುವವೊಡಾಫೋನ್ ಗ್ರಾಹಕರು ಮಾಸಿಕ ಬಿಲ್ ಜತೆಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಆಯ್ಕೆ ಪಡೆದುಕೊಳ್ಳಬಹುದಾಗಿದೆ.
ಆಕ್ಟ್ ಫೈಬರ್‌ನೆಟ್: ACT ಫೈಬರ್‌ನೆಟ್ ಜತೆಗೆ ನೆಟ್‌ಫ್ಲಿಕ್ಸ್ ಒಪ್ಪಂದ ಮಾಡಿಕೊಂಡಿದ್ದು, ಆಕ್ಟ್ ಫೈಬರ್‌ನೆಟ್ ಮಾಸಿಕ ಬಿಲ್ ಜತೆಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಶುಲ್ಕವನ್ನೂ ಪಾವತಿಸಬಹುದು. ಗ್ರಾಹಕರು ಪಾವತಿಸುವ ಬಿಲ್‌ಗೆ ₹500ರಷ್ಟು ಕ್ಯಾಷ್‌ಬ್ಯಾಕ್ ಸಹ ಪಡೆಯುತ್ತಾರೆ. ಹೊಸದಾಗಿ ಬಿಡುಗಡೆಯಾಗಿರುವ ಆಕ್ಟ್ ಸ್ಟ್ರೀಮ್ ಟಿವಿ 4ಕೆ ಸಾಧನವು ರಿಮೋಟ್‌ನ ಒಂದೇ ಕ್ಲಿಕ್‌ನಲ್ಲಿ ನೆಟ್‌ಫ್ಲಿಕ್ಸ್ ತೆರೆದುಕೊಳ್ಳುವ ಆಯ್ಕೆ ನೀಡಿದೆ.
ಹ್ಯಾಥ್‌ವೇ: ಇತರೆ ಟಿವಿ ಚಾನೆಲ್‌ಗಳನ್ನು ವೀಕ್ಷಿಸುವಂತೆ ಹ್ಯಾಥ್‌ವೇ ಸೆಟ್ ಟಾಪ್ ಬಾಕ್ಸ್ ಮೂಲಕ ನೆಟ್‌ಫ್ಲಿಕ್ಸ್ ಕಾರ್ಯಕ್ರಮ ನೋಡುವುದು ಸಾಧ್ಯವಿದೆ. ಹ್ಯಾಥ್‌ವೇ ಸೆಟ್ ಟಾಪ್ ಬಾಕ್ಸ್ ರಿಮೋಟ್‌ನಲ್ಲೇ ನೆಟ್‌ಫ್ಲಿಕ್ಸ್ ಬಟನ್ ಹೊಂದಿದ್ದು, ಹ್ಯಾಥ್‌ವೇ ಬ್ರಾಡ್‌ಬ್ಯಾಂಡ್ ಬಿಲ್ ಜತೆಗೆ ನೆಟ್‌ಫ್ಲಿಕ್ಸ್ ಶುಲ್ಕವನ್ನೂ ಪಾವತಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.