ADVERTISEMENT

`ಕ್ರೈಮ್ ಸ್ಟೋರಿ-ಇಂಡಿಯಾ ಡಿಟೆಕ್ಟಿವ್’ ಪ್ರಸಾರ ನಿಲ್ಲಿಸಲು ಕೋರ್ಟ್‌ಗೆ ಮೊರೆ

ನೆಟ್‌ಫ್ಲಿಕ್ಸ್‌ನಲ್ಲಿ ಬೆಂಗಳೂರು ಪೊಲೀಸರ ಸಾಹಸಗಾಥೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 15:24 IST
Last Updated 3 ಅಕ್ಟೋಬರ್ 2021, 15:24 IST
ನೆಟ್‌ ಫ್ಲಿಕ್ಸ್‌ ಸರಣಿಯ ಪೋಸ್ಟರ್‌
ನೆಟ್‌ ಫ್ಲಿಕ್ಸ್‌ ಸರಣಿಯ ಪೋಸ್ಟರ್‌   

ಬೆಂಗಳೂರು: ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಅಪರಾಧ ಪ್ರಕರಣಗಳ ವೆಬ್‌ ಸರಣಿ `ಕ್ರೈಮ್ ಸ್ಟೋರಿ-ಇಂಡಿಯಾ ಡಿಟೆಕ್ಟಿವ್’ನ ಪ್ರಸಾರ ನಿಲ್ಲಿಸುವಂತೆ ಕೋರಿ ಪ್ರಕರಣವೊಂದರ ಆರೋಪಿ ಶ್ರೀಧರ ರಾವ್‌ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ.

ನಿರ್ಮಲಾ ಎಂಬ ಮಹಿಳೆ ಹಾಗೂ ಆಕೆಯ ಮಗ ಹರೀಶ್‍ನನ್ನು ನಿರ್ಮಲಾ ಅವರ ಮಗಳಾದ ಅಮೃತಾ ಅವರು ಪಿತೂರಿ ನಡೆಸಿದ್ದಾರೆ ಎನ್ನಲಾದ ಪ್ರಕರಣದ ಪ್ರಸಾರಕ್ಕೆ ತಡೆ ಕೋರಿದ್ದಾರೆ. ಪ್ರಕರಣದಲ್ಲಿಶ್ರೀಧರ್ ರಾವ್ ಎಂಬುವವರನ್ನು ಆರೋಪಿಯನ್ನಾಗಿಸಿ ಬೆಂಗಳೂರಿನ ಕೃಷ್ಣರಾಜಪುರಂ ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿತ್ತು. ಆಗ ನೆಟ್‌ಫ್ಲಿಕ್ಸ್‌ಗಾಗಿ ಮಿನ್ನೋವ್‌ ಫಿಲ್ಮ್ಸ್‌ ಸಂಸ್ಥೆಯವರು ಶ್ರೀಧರರಾವ್‌ ಅವರ ಚಿತ್ರೀಕರಣ ನಡೆಸಿದ್ದರು ಮತ್ತು ಹೇಳಿಕೆ ದಾಖಲಿಸಿದ್ದರು.

‘ತಮ್ಮ ಕಕ್ಷಿದಾರರ ಯಾವುದೇ ಅನುಮತಿ ಇಲ್ಲದೇ ಅಪರಾಧ ಪ್ರಕ್ರಿಯೆಯ ನಿಯಮ ಅನುಸರಿಸದೆ ಆರೋಪಿಗಳ ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಶ್ರೀಧರ್ ಅವರನ್ನು ಕಥೆಯ ಸೃಷ್ಟಿಯ ಉದ್ದೇಶಕ್ಕೆ ಬಳಸಲಾಗಿದೆ. ಈ ವಿಡಿಯೋ ಅವರ ತಪ್ಪೊಪ್ಪಿಗೆ ಎನ್ನುವಂತೆ ಚಿತ್ರಿಸಲಾಗಿದೆ’ ಎಂದು ಶ್ರೀಧರ್‌ ಅವರ ಪರ ವಕೀಲಎ.ಎಂ.ಇಕ್ತಿಯಾರ್ ಉದ್ದೀನ್ ತಿಳಿಸಿದ್ದಾರೆ.

ADVERTISEMENT

ಈ ವಿಡಿಯೋ ಅರ್ಜಿದಾರರ ಖಾಸಗಿತನವನ್ನು ಉಲ್ಲಂಘಿಸಿದೆ. ವಿಚಾರಣೆಯ ಹಂತದಲ್ಲಿರುವ ಪ್ರಕರಣದ ಅರ್ಜಿದಾರರಿಂದ ಹೇಳಿಕೆ ಪಡೆಯಲಾಗಿದೆ. ಹೀಗಾಗಿ ಈ ಸರಣಿಗೆ ತಡೆ ಕೊಡಬೇಕು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.