ಬಿಗ್‌ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಅವರ ವಿವಾಹ ಮುರಿದುಬಿದ್ದಿದೆ. ನವೆಂಬರ್ 11ರಂದು ವಿದ್ಯಾಭರಣ್ ಎಂಬ ಉದ್ಯಮಿ ಜೊತೆ ವೈಷ್ಣವಿ ಅವರ ಮದುವೆ ಮಾತುಕತೆ ನಡೆದಿತ್ತು. ಇಬ್ಬರೂ ಹಾರ ಹಾಕಿಕೊಂಡಿರುವ ಚಿತ್ರ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಮಾತುಕತೆ ಮುರಿದುಬಿದ್ದಿದೆ. ದಯವಿಟ್ಟು ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ಇಂಥ ವಿಚಾರಗಳನ್ನೆಲ್ಲಾ ಎಳೆದಾಡುವುದು ಬೇಡ ಎಂದು ವೈಷ್ಣವಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವಿ ಅವರ ತಂದೆ ರವಿಕುಮಾರ್, ‘ಹಿರಿಯರೇ ನಿಶ್ಚಯಿಸಿದ ಮದುವೆ. ಈಗ ಈ ರೀತಿ ಆಗಿದೆ. ಇದಕ್ಕೆ ಯಾರು ಕಾರಣರು ಏನು ಎಂಬುದು ಗೊತ್ತಿಲ್ಲ. ಮಗಳ ನಿರ್ಧಾರವೇ ಅಂತಿಮ. ಸಹಜವಾಗಿ ನಮಗೆಲ್ಲರಿಗೂ ಬೇಸರವಾಗಿದೆ. ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ. ಮಗಳ ಮನಸ್ಥಿತಿ ಸರಿಹೋದ ಮೇಲೆ ಮುಂದಿನ ವಿಚಾರ ಮಾಡುತ್ತೇವೆ ಎಂದು ಹೇಳಿದರು.
ವಿದ್ಯಾಭರಣ್ ಅವರ ಕುರಿತು ಹರಿದಾಡಿದ ಆಡಿಯೋವೊಂದು ಈ ಬೆಳವಣಿಗೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಆದರೆ, ಕುಟುಂಬದವರಾಗಲಿ ವೈಷ್ಣವಿ ಅವರಾಗಲಿ ಈ ವಿಚಾರ ದೃಢಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.