ಬೆಂಗಳೂರು: ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ಕರಣ್ ಮೆಹ್ರಾ ಮತ್ತು ನಿಶಾ ರಾವಲ್ ದಂಪತಿ ಈಗ ಕೌಟುಂಬಿಕ ದೌರ್ಜನ್ಯ ಪ್ರಕರಣ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಕರಣ್ ಮತ್ತು ನಿಶಾ ಪರಸ್ಪರ ಆರೋಪ ಹೊರಿಸಿದ್ದು, ದೂರು ಕೂಡ ದಾಖಲಾಗಿದೆ. ಆದರೆ ಈ ಬೆನ್ನಲ್ಲೇ ದಂಪತಿ ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಹಂಚಿಕೊಂಡಿದ್ದ ಮಧುರ ಕ್ಷಣಗಳ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಹಳೆಯ ವಿಡಿಯೊ ಇದಾಗಿದ್ದು, ನಿಶಾ ರಾವಲ್ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಲಾಕ್ಡೌನ್ 1 ಮೆಮೊರೀಸ್ ಎಂದು ಅಡಿಬರಹ ನೀಡಿದ್ದಾರೆ.
ನಿಶಾ ರಾವಲ್, ಕರಣ್ ಮೆಹ್ರಾ ವಿರುದ್ಧ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದು, ಕೌಟುಂಬಿಕ ಹಿಂಸೆ ಮತ್ತು ಕರಣ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಕರಣ್ನನ್ನು ಪೊಲೀಸರು ಬಂಧಿಸಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.