ADVERTISEMENT

ಕನ್ನಡದಲ್ಲಿ ‘ನೇತಾಜಿ’ ಧಾರಾವಾಹಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 19:30 IST
Last Updated 3 ಜೂನ್ 2021, 19:30 IST
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪೋಸ್ಟರ್‌
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪೋಸ್ಟರ್‌   

ಕನ್ನಡದಲ್ಲಿ ‘ನೇತಾಜಿ’ ಧಾರಾವಾಹಿ ಲಾಕ್‌ಡೌನ್‌ನಿಂದಾಗಿ ಹಲವು ಧಾರಾವಾಹಿಗಳ ಚಿತ್ರೀಕರಣ ಸ್ತಬ್ಧವಾಗಿರುವ ಬೆನ್ನಲ್ಲೇ ಹೊಸ ಧಾರಾವಾಹಿಯೊಂದನ್ನು ಜೀ ಕನ್ನಡ ಪ್ರಾರಂಭ ಮಾಡುತ್ತಿದೆ.

ಬಂಗಾಳಿ ಮೂಲದ ಧಾರಾವಾಹಿಯ ಕನ್ನಡದ ಅವತರಣಿಕೆ ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌’ ಜೂನ್‌ 7ರಿಂದ ಪ್ರಸಾರವಾಗಲಿದೆ. ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 6 ಗಂಟೆಯವರೆಗೆ ಒಂದು ಗಂಟೆ ಕಾಲ ಪ್ರಸಾರವಾಗಲಿರುವ ಈ ಧಾರಾವಾಹಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಬಿಂಬಿಸುತ್ತದೆ.

‘ಈ ಹಿಂದೆ ‘ಅಂಬೇಡ್ಕರ್’ ಧಾರಾವಾಹಿ ಮುಖಾಂತರ ಕನ್ನಡಿಗರ ಮನೆ ಮಾತಾಗಿದ್ದ ಜೀ ಕನ್ನಡ, ಇದೀಗ ಸುಭಾಷ್ ಚಂದ್ರ ಬೋಸ್ ಅವರ ಜೀವನಗಾಥೆಯನ್ನು ಇತಿಹಾಸವನ್ನು ಮರು ಕಟ್ಟಿಕೊಡಲಿದೆ. ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಕಿಚ್ಚು ತುಂಬುವ ಈ ಧಾರಾವಾಹಿಯನ್ನು ವೀಕ್ಷಕರು ಈ ಹಿಂದಿನ ಎಲ್ಲ ಧಾರಾವಾಹಿಗಳಂತೆಯೇ ಸ್ವೀಕರಿಸುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ’ ಎಂದು ತಂಡವು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.