ADVERTISEMENT

ಜಾಹೀರಾತು ಸಹಿತ ಚಂದಾದಾರಿಕೆ ಆಯ್ಕೆ ನೀಡಲಿದೆ ನೆಟ್‌ಫ್ಲಿಕ್ಸ್

ಜಾಹೀರಾತು ಪ್ರಸಾರದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ನೆಟ್‌ಫ್ಲಿಕ್ಸ್ ಪ್ಲ್ಯಾನ್

ಏಜೆನ್ಸೀಸ್
Published 14 ಅಕ್ಟೋಬರ್ 2022, 9:35 IST
Last Updated 14 ಅಕ್ಟೋಬರ್ 2022, 9:35 IST
   

ಸ್ಯಾನ್ ಫ್ರಾನ್ಸಿಸ್ಕೊ: ಜಾಹೀರಾತು ಸಹಿತ ಚಂದಾದಾರಿಕೆ ಆಯ್ಕೆಯನ್ನು ನವೆಂಬರ್ ತಿಂಗಳಿನಿಂದ ಆರಂಭಿಸುತ್ತಿರುವುದಾಗಿ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ತಿಳಿಸಿದೆ.

ಈಗಾಗಲೇ 9,70,000 ಚಂದಾದಾರರನ್ನು ನೆಟ್‌ಫ್ಲಿಕ್ಸ್ ಕಳೆದುಕೊಂಡಿದೆ. ಅಲ್ಲದೆ, ಷೇರು ಬೆಲೆ ಕೂಡ ಶೇ 63ರಷ್ಟು ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಆದಾಯದಲ್ಲಿ ಇಳಿಕೆಯಾಗಿದೆ.

ಹೀಗಾಗಿ, ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ ಮತ್ತು ಸ್ಪೇನ್‌ನಲ್ಲಿ ಮೊದಲ ಹಂತದಲ್ಲಿ ನೆಟ್‌ಫ್ಲಿಕ್ಸ್ ಹೊಸ ಚಂದಾದಾರಿಕೆ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

ADVERTISEMENT

ಹೊಸ ಬೇಸಿಕ್ ವಿತ್ ಆ್ಯಡ್ಸ್ ಪ್ಯಾಕ್, $6.99 ದರಕ್ಕೆ ಅಮೆರಿಕದಲ್ಲಿ ದೊರೆಯಲಿದೆ. ಜಾಹೀರಾತು ಇಲ್ಲದ ಪ್ಲ್ಯಾನ್‌ಗಳೂ ನೆಟ್‌ಫ್ಲಿಕ್ಸ್‌ನಲ್ಲಿ ಇರಲಿದೆ.

ವಿಡಿಯೊ ಜಾಹೀರಾತುಗಳು 15ರಿಂದ 30 ಸೆಕೆಂಡ್ಸ್ ಇರಲಿದೆ. ಡಿಸ್ನಿ+ ಕೂಡ ಶೀಘ್ರದಲ್ಲೇ ಒಟಿಟಿ ವೆದಿಕೆಯಲ್ಲಿ ಜಾಹೀರಾತು ಪ್ರಸಾರ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.