ADVERTISEMENT

10 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್: ಆದಾಯ ಕುಸಿತ

ರಾಯಿಟರ್ಸ್
Published 20 ಜುಲೈ 2022, 5:13 IST
Last Updated 20 ಜುಲೈ 2022, 5:13 IST
   

ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಚಂದಾದಾರರ ಸಂಖ್ಯೆಯಲ್ಲಿ ಕಳೆದ ಏಪ್ರಿಲ್‌ ತಿಂಗಳಿನಿಂದ 10 ಲಕ್ಷದಷ್ಟು ಇಳಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ಏಪ್ರಿಲ್‌ನಲ್ಲಿ ವರದಿ ನೀಡಿದ್ದ ನೆಟ್‌ಫ್ಲಿಕ್ಸ್, ಅಂದಾಜು 2 ಲಕ್ಷ ಚಂದಾದಾರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ, ಮಂಗಳವಾರ ಹೇಳಿಕೆ ನೀಡಿರುವ ಕಂಪನಿ, 9,70,000 ಚಂದಾದಾರರನ್ನು ಕಳೆದುಕೊಂಡಿದ್ದೇವೆ ಎಂದಿದೆ.

ಮುಂದಿನ ವರ್ಷ ಜಾಹೀರಾತು ಸಹಿತ ಸ್ಟ್ರೀಮಿಂಗ್ ಮತ್ತು ಪಾಸ್‌ವರ್ಡ್ ಹಂಚಿಕೊಳ್ಳುವುದಕ್ಕೆ ಶುಲ್ಕ ವಿಧಿಸುವ ಕುರಿತಂತೆ ಯೋಜನೆ ರೂಪಿಸಿದ್ದ ನೆಟ್‌ಫ್ಲಿಕ್ಸ್‌ಗೆ ಚಂದಾದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿರುವುದು ತೊಂದರೆಯಾಗಿದೆ.

ADVERTISEMENT

ಜಾಗತಿಕವಾಗಿ 22 ಕೋಟಿ ಚಂದಾದಾರರನ್ನು ಹೊಂದಿರುವ ನೆಟ್‌ಫ್ಲಿಕ್ಸ್ ಒಟಿಟಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಪ್ರತಿಸ್ಪರ್ಧಿ ಕಂಪನಿಗಳಾದ ವಾಲ್ಟ್ ಡಿಸ್ನಿ ಹಾಟ್‌ಸ್ಟಾರ್, ವಾರ್ನರ್‌ ಬ್ರೊ ಡಿಸ್ಕವರಿ ಮತ್ತು ಆ್ಯಪಲ್ ಟಿವಿ ಒಟಿಟಿ ವೇದಿಕೆಗಳಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿರುವುದರಿಂದ ಚಂದಾದಾರರು ಅತ್ತ ಸರಿಯುತ್ತಿದ್ದಾರೆ.

ಇದರಿಂದ ನೆಟ್‌ಫ್ಲಿಕ್ಸ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.