ನವದೆಹಲಿ: ಆನ್‌ಲೈನ್ ಸ್ಟ್ರೀಮಿಂಗ್ ತಾಣ ನೆಟ್‌ಫ್ಲಿಕ್ಸ್, ಈ ವರ್ಷದ ಕೊನೆಗೆ ತನ್ನ ವೇದಿಕೆಯಲ್ಲಿ ಜಾಹೀರಾತು ಪ್ರಸಾರ ಮಾಡುವುದಾಗಿ ಹೇಳಿದೆ.
ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್, 2022ರ ಮೊದಲ ತ್ರೈಮಾಸಿಕದಲ್ಲಿ 2 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡಿದೆ. ಅಲ್ಲದೆ, ಎರಡು ಹಂತಗಳಲ್ಲಿ 450 ಸಿಬ್ಬಂದಿ ಕಡಿತ ಮಾಡಿದೆ.
ಜತೆಗೆ, ನಷ್ಟದ ಹಾದಿಯಲ್ಲಿದ್ದು, ವೆಚ್ಚ ಸರಿದೂಗಿಸಲು ಮತ್ತು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಹೀಗಾಗಿ, ಮುಂದೆ ಜಾಹೀರಾತುಗಳನ್ನು ಪ್ರಸಾರ ಮಾಡುವ ಉದ್ದೇಶ ಇದೆ ಎಂದು ನೆಟ್‌ಫ್ಲಿಕ್ಸ್ ಸಹ ಕಾರ್ಯನಿರ್ವಹಣಾ ಅಧಿಕಾರಿ ಸಾರಾನೊಸ್ ಹೇಳಿರುವುದಾಗಿ ‘ಹಾಲಿವುಡ್ ರಿಪೋರ್ಟರ್‘ ವರದಿ ಮಾಡಿದೆ.
ನಷ್ಟವನ್ನು ಕಡಿಮೆ ಮಾಡಲು ನೆಟ್‌ಫ್ಲಿಕ್ಸ್ ಹಲವು ಕ್ರಮಕ್ಕೆ ಮುಂದಾಗಿದ್ದು, ಅದರ ಪರಿಣಾಮ ಸಿಬ್ಬಂದಿ ಕಡಿತ ಮತ್ತು ಜಾಹೀರಾತು ಪ್ರಸಾರದಂತಹ ನಿರ್ಧಾರ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.