ADVERTISEMENT

ವೆಚ್ಚ ಕಡಿತ: 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ನೆಟ್‌ಫ್ಲಿಕ್ಸ್

ರಾಯಿಟರ್ಸ್
Published 24 ಜೂನ್ 2022, 6:09 IST
Last Updated 24 ಜೂನ್ 2022, 6:09 IST
   

ಪ್ರಮುಖ ಒಟಿಟಿ ವೇದಿಕೆ ನೆಟ್‌‍ಫ್ಲಿಕ್ಸ್ ವೆಚ್ಚ ಕಡಿತದ ಕ್ರಮವಾಗಿ 300 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಸಂಖ್ಯೆ, ನೆಟ್‌ಫ್ಲಿಕ್ಸ್‌ನ ಒಟ್ಟಾರೆ ಸಿಬ್ಬಂದಿ ಸಂಖ್ಯೆಯ ಶೇ 4ರಷ್ಟಿದೆ.

ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ನೆಟ್‌ಫ್ಲಿಕ್ಸ್ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡಿತ್ತು.

ಮೊದಲ ಬಾರಿಗೆ 150 ಸಿಬ್ಬಂದಿ ಕಡಿತಗೊಳಿಸಿದ್ದ ನೆಟ್‌ಫ್ಲಿಕ್ಸ್, ಈ ಬಾರಿ 300 ಉದ್ಯೋಗಿಗಳನ್ನು ತೆಗೆದುಹಾಕಿದೆ.

ADVERTISEMENT

ಮಾರುಕಟ್ಟೆಯಲ್ಲಿನ ಹೂಡಿಕೆ, ವೆಚ್ಚಗಳ ನಿರ್ವಹಣೆ ಮತ್ತು ಏರಿಕೆಯಾಗುತ್ತಿರುವ ವೆಚ್ಚ ನಿಯಂತ್ರಿಸುವ ಕ್ರಮವಾಗಿ ಕೆಲವೊಂದು ಬದಲಾವಣೆ ಮಾಡಲಾಗುತ್ತಿದೆ. ಅದರ ಅಂಗವಾಗಿ, ಸಿಬ್ಬಂದಿ ಕಡಿತ ಮಾಡಲಾಗಿದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.