ADVERTISEMENT

ಕಾಮಿಡಿ ವಿತ್ ಕಪಿಲ್ ಶೋಗೆ ಆಹ್ವಾನ ನೀಡಿದಾಗ ಪ್ರಧಾನಿ ಮೋದಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2023, 13:38 IST
Last Updated 11 ಮಾರ್ಚ್ 2023, 13:38 IST
ಕಾಮಿಡಿ ವಿತ್ ಕಪಿಲ್ ಶೋ
ಕಾಮಿಡಿ ವಿತ್ ಕಪಿಲ್ ಶೋ   

ನವದೆಹಲಿ: ಹಿಂದಿಯ ಜನಪ್ರಿಯ ಕಿರುತೆರೆ ಶೋ ‘ಕಾಮಿಡಿ ವಿತ್ ಕಪಿಲ್’ನಲ್ಲಿ (ಕಾಮಿಡಿ ನೈಟ್ಸ್‌ ವಿತ್ ಕಪಿಲ್) ಸಾಕಷ್ಟು ಸೆಲಿಬ್ರಿಟಿಗಳು ಬಂದು ಹೋಗಿದ್ದಾರೆ. ಆ ಶೋ ನಲ್ಲಿ ಭಾಗವಹಿಸಬೇಕು ಎಂದು ಅನೇಕ ಸ್ಟಾರ್ ನಟ ನಟಿಯರೇ ಹಾತೊರೆಯುತ್ತಿರುತ್ತಾರೆ.

ಇಂತಹ ಶೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬಹುದಾ? ಎಂದು ನೀವು ಊಹಿಸಿದ್ದರೇ ನಿಮ್ಮ ಊಹೆ ಸರಿ ಇದೆ.

ಹೌದು, ಈ ಕಾಮಿಡಿ ಶೋನ ನಿರೂಪಕರಾಗಿರುವ ಕಪಿಲ್ ಶರ್ಮಾ ಅವರು ಸತ್ಯ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ಕಾಮಿಡಿ ವಿತ್ ಕಪಿಲ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದೆ ಎಂದು ಕಪಿಲ್ ಶರ್ಮಾ ಬಹಿರಂಗಪಡಿಸಿದ್ದಾರೆ.

ADVERTISEMENT

‘ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾಗ, ಸರ್ ನಮ್ಮ ಕಾಮಿಡಿ ವಿತ್ ಕಪಿಲ್ ಶೋದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡಿದ್ದೆ. ಅವರು ತಕ್ಷಣಕ್ಕೆ ಇಲ್ಲವೇ ಇಲ್ಲ ಎಂದು ಹೇಳಲಿಲ್ಲ. ಸದ್ಯ ನಮ್ಮ ವಿರೋಧ ಪಕ್ಷದವರು ಚೆನ್ನಾಗಿ ಕಾಮಿಡಿ ಮಾಡುತ್ತಿದ್ದಾರೆ. ನೋಡೊಣ.. ಎಂದು ಹೇಳಿದರು. ಅವರು ಚೆನ್ನಾಗಿ ಜೋಕ್‌ಗಳನ್ನು ಮಾಡುವುದನ್ನು ನಾನು ನೋಡಿದ್ದೇನೆ, ಕೇಳಿದ್ದೇನೆ. ನಮ್ಮ ಶೋಕ್ಕೆ ಬರುವ ನಿರೀಕ್ಷೆ ಇದೆ. ಇದು ನಿಜವಾದರೆ ಇದಂತೂ ಅತ್ಯಂತ ಖುಷಿಯ ವಿಚಾರ’ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ತೆರೆಗೆ ಬರಲಿರುವ ಕಪಿಲ್ ಶರ್ಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಜ್ವಿಗಾಟೊ ಸಿನಿಮಾದ ವಿಶೇಷ ಸಂದರ್ಶನದಲ್ಲಿ ಕಪಿಲ್ ಶರ್ಮಾ ಮಾತನಾಡಿದ್ದಾರೆ. ಆಜ್ ತಕ್ ಚಾನಲ್ ಸಂದರ್ಶನ ನಡೆಸಿತ್ತು.

ನಟ ಕಪಿಲ್ ಶರ್ಮಾ ಅವರು ನಡೆಸಿ ಕೊಡುವ ಈ ಶೋನಲ್ಲಿ ಸುಮನ್ ಚಕ್ರವರ್ತಿ, ಭಾರತಿ ಸಿಂಗ್, ಸುಂದೇಶ್ ಲೆಹರಿ, ಅರ್ಚನಾ ಸಿಂಗ್ ಸಹ ಶೋವನ್ನು ನಡೆಸಿ ಕೊಡುತ್ತಾರೆ. ಅಪಾರ ವೀಕ್ಷಕರನ್ನು ಹೊಂದಿರುವ ಈ ಕಾರ್ಯಕ್ರಮ ಅನೇಕ ಸಲ ವಿವಾದಗಳಿಗೂ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.