ADVERTISEMENT

ಭೂತವಾದರೆ ವಿಕ್ಕಿ ಕೌಶಲ್ ಬೆನ್ನು ಹತ್ತುತ್ತೇನೆ: ಕತ್ರಿನಾಗೆ ಸಲ್ಮಾನ್ ಉತ್ತರ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2022, 10:47 IST
Last Updated 29 ಅಕ್ಟೋಬರ್ 2022, 10:47 IST
   

ಮುಂಬೈ: ನಾನು ಭೂತವಾದರೆ ವಿಕ್ಕಿ ಕೌಶಲ್ ಬೆನ್ನು ಬೀಳುವುದಾಗಿ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟಿ ಕತ್ರಿನಾ ಕೈಫ್‌ಗೆ ಹೇಳಿದ್ದಾರೆ.

ಹಿಂದಿಯ ಬಿಗ್ ಬಾಸ್–16ರ ವೇದಿಕೆಗೆ ತಮ್ಮ ಮುಂಬರುವ ‘ಫೋನ್ ಬೂತ್’ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಕತ್ರಿನಾ, ನಿಮಗೆ ಭೂತವಾಗುವ ಅವಕಾಶ ಸಿಕ್ಕೆರೆ ಯಾರ ಬೆನ್ನು ಹತ್ತುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಸಲ್ಮಾನ್ ಖಾನ್, ಅಲ್ಲೊಬ್ಬ ವಿಕ್ಕಿ ಕೌಶಲ್ ಎಂಬ ಹುಡುಗನಿದ್ದಾನೆ. ಅವನ ಬೆನ್ನು ಹತ್ತುತ್ತೇನೆ ಎಂದು ಹೇಳಿದರು.

ವಿಕ್ಕಿ ಕೌಶಲ್ ಹೆಸರು ಹೇಳುತ್ತಿದ್ದಂತೆ ಕತ್ರೀನಾ ನಾಚಿ ನೀರಾದರು. ಬಳಿಕ, ನಾಚುತ್ತಲೇ ವಿಕ್ಕಿ.. ಯಾಕೆ? ಎಂದು ಮರು ಪ್ರಶ್ನೆ ಹಾಕಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್, ಅವನು ತುಂಬಾ ಪ್ರೀತಿಸುವ, ಕಾಳಜಿಯುಳ್ಳ, ಧೈರ್ಯಶಾಲಿ ವ್ಯಕ್ತಿಯಾಗಿದ್ದಾನೆ.. ಅವನ ಬಗ್ಗೆ ಮಾತನಾಡುವಾಗ, ನೀವು ನಾಚಿಕೊಳ್ಳುತ್ತೀರಿ ಎಂದು ತಮಾಷೆಯಾಗಿ ಕಿಚಾಯಿಸಿದರು.

ಕತ್ರೀನಾ ಕೈಫ್, ಸಿದ್ಧಾರ್ಥ್ ಚತುರ್ವೇದಿ ಮುಖ್ಯ ಭೂಮಿಕೆಯಲ್ಲಿರುವ ಫೋನ್ ಬೂತ್ ಚಿತ್ರವನ್ನು ಗುರ್‌ಮೀತ್ ಸಿಂಗ್ ನಿರ್ದೇಶಿಸಿದ್ದು, ರವಿಶಂಕರನ್ ಮತ್ತು ಜಸ್ವಿಂದರ್ ಸಿಂಗ್ ಚಿತ್ರಕಥೆ ಬರೆದಿದ್ದಾರೆ. ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಚಿತ್ರದ ನಿರ್ಮಾಣ ಮಾಡಿದ್ದು, ನವೆಂಬರ್ 4ಕ್ಕೆ ಚಿತ್ರ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.